ಮುದುಗೆರೆ ಕೆರೆ ಭರ್ತಿ : ಗ್ರಾಮಸ್ಥರಿಂದ ಭಾಗಿನ, ಗಂಗಾಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

K-R-Pete-1
ಕೆ.ಆರ್.ಪೇಟೆ,ಅ.15- ತಾಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಕೆರೆಯು ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೆರೆಗೆ ಭಾಗೀನ ಅರ್ಪಿಸಿ, ಗಂಗಾಪೂಜೆಯನ್ನು ನೆರವೇರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್, ಮಾಜಿ ಗ್ರಾ.ಪಂ.ಸದಸ್ಯ ಯೋಗಣ್ಣ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಮುಖಂಡರ ಸಮ್ಮುಖದಲ್ಲಿ ಮಂಗಳವಾದ್ಯ ಮತ್ತು ಪೂರ್ಣಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ಗ್ರಾಮದ ದೇವಸ್ಥಾನದ ಬಳಿ ಇರುವ ಕೆರೆಗೆ ಬಾಗೀನ ಅರ್ಪಿಸುವ ಮೂಲಕ ಪ್ರತಿವರ್ಷವೂ ಇದೇ ರೀತಿ ಮಳೆಯಾಗಲಿ, ಜೊತೆಗೆ ಹೇಮಾವತಿ ಕಾಲುವೆಯ ನೀರೂ ಸಹ ಸಮಯಕ್ಕೆ ಸರಿಯಾಗಿ ಹರಿದು ರೈತರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯ ಪರಮೇಶ್, ಮಾಜಿ ಗ್ರಾ.ಪಂ.ಸದಸ್ಯ ಯೋಗಣ್ಣ, ಯಜಮಾನ್ ಕರೀಗೌಡ, ರೈತ ಮುಖಂಡರಾದ ಎಂ.ವಿ.ರಾಜೇಗೌಡ, ಬೂಕನಕೆರೆ ನಾಗರಾಜು, ಸದಸ್ಯ ಕಾಳಪ್ಪ, ದೇವೇಗೌಡ, ಮಂಜು, ರವಿ, ಅಶ್ವತ್, ಮಂಜುನಾಥ್, ಕುಮಾರ್, ದಿನೇಶ್, ಹರೀಶ್, ಬಸವರಾಜು, ರಂಗಯ್ಯ, ಸಣ್ಣಯ್ಯ, ಕುಳ್ಳಯ್ಯ, ಬಸವಯ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿ ಭಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin