ಮುರ್ಡೇಶ್ವರದ ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಮೂವರಲ್ಲಿ ಇಬ್ಬರ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Beach

ದಕ್ಷಿಣ ಕನ್ನಡ,ಅ.14-ಮುರ್ಡೇಶ್ವರದ ಪ್ರವಾಸಕ್ಕೆ ತೆರಳಿ ಅಲ್ಲಿನ ಸಮುದ್ರದಲ್ಲಿ ಈಜಾಡುತ್ತಿದ್ದಾಗ ನೀರು ಪಾಲಾಗಿದ್ದ ಮೂರು ಯುವಕರ ಪೈಕಿ ಇಬ್ಬರ ಶವ ಪತ್ತೆಯಾಗಿದ್ದು, ಮತ್ತೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ನಿವಾಸಿಗಳಾದ ಕಾರ್ತಿಕ್ ಮಂಜೇಗೌಡ(19), ಕುಮಾರ್(20) ಹಾಗೂ ಪುನೀತ್ ಮೃತಪಟ್ಟ ಯುವಕರು.  ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಿಂದ ಪ್ರವಾಸಕ್ಕೆಂದು ಒಂಭತ್ತು ಮಂದಿ ಯುವಕರು ತೆರಳಿದ್ದು , ನಿನ್ನೆ ಮುರ್ಡೇಶ್ವರ ಸಮುದ್ರಕ್ಕೆ ಈಜಲೆಂದು ತೆರಳಿದರು. ಈ ವೇಳೆ ಕಾರ್ತಿಕ ಮಂಜೇಗೌಡ, ಪುನೀತ, ಕುಮಾರ್ ಕಡಲಿಗೆ ಸಿಕ್ಕಿ ಸಾವನ್ನಪ್ಪಿದ್ದರು. ಈ ಪೈಕಿ ಕಾರ್ತಿಕ ಮಂಜೇಗೌಡ, ಪುನೀತರ ಶವ ಆರ್‍ಎಸ್‍ಎಸ್ ಹೋಟೆಲ್ ಬಳಿ ಪತ್ತೆಯಾಗಿದ್ದು , ಕುಮಾರ್ ಶವಕ್ಕಾಗಿ ಕರಾವಳಿ ಪಡೆಯು ಶೋಧ ಕಾರ್ಯ ನಡೆಸುತ್ತಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin