ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದೇ ತಪ್ಪಾಯ್ತು : ಯುವಕನ ಅಪ್ಪ-ಸಹೋದರನನ್ನ ಮರಕ್ಕೆ ಕಟ್ಟಿ ಹಾಕಿ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Muslim--1

ವಿಜಯಪುರ, ಜೂ.28- ಹರಿಜನ ತರುಣನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಇಬ್ಬರೂ ಪರಾರಿಯಾಗಿದ್ದು, ಇತ್ತ ಯುವತಿಯ ತಂದೆ ಮತ್ತು ಸಹೋದರರು ತರುಣನ ಅಪ್ಪ ಮತ್ತು ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸಿಂಧಗಿ ತಾಲೂಕಿನ ಹಾಳಗುಂದಕನಾಳ ಗ್ರಾಮದಲ್ಲಿ ನಡೆದಿದೆ. ಮಾರಪ್ಪ ಹರಿಜನ ಎಂಬುವರ ಮಗ ನಿಂಗಪ್ಪ ಹರಿಜನ (30) ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಅವರಿಬ್ಬರೂ ಓಡಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಹುಡುಗಿಯ ತಂದೆ ಮಾಬುಸಾಬ್ ಮತ್ತು ಸಹೋದರ ಅಲ್ಲಾಭಕ್ಷ್ ಇಬ್ಬರೂ ನಿಂಗಪ್ಪ ಹರಿಜನ ಮನೆಗೆ ಬಂದು ಅವರ ತಂದೆ ಮಾರಪ್ಪ ಮತ್ತು ಸಹೋದರ ರಮೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇಬ್ಬರನ್ನೂ ಹಿಡಿದು ನಮ್ಮ ಮಗಳು ಎಲ್ಲಿ ಹೋಗಿದ್ದಾಳೆ ಹೇಳು ಎಂದು ಒತ್ತಾಯಿಸಿ ಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ.   ಮಾರಪ್ಪ ಹರಿಜನ ಮತ್ತು ರಮೇಶ್ ತಲೆಗಳಿಗೆ ಭಾರೀ ಪೆಟ್ಟು ಬಿದ್ದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಿಂಧಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin