ಮುಸ್ಸಂಜೆ ಮಹೇಶ್ ಹಾಗೂ ದತ್ತಾತ್ರೇಯ ಬಚ್ಚೇಗೌಡ ಅವರ ಕಾಂಬಿನೇಷನ್‍ನಲ್ಲಿ ಡಬಲ್ ಧಮಾಕ

ಈ ಸುದ್ದಿಯನ್ನು ಶೇರ್ ಮಾಡಿ

Mussanje-Mahesh

ಮುಸ್ಸಂಜೆ ಮಹೇಶ್ ಹಾಗೂ ದತ್ತಾತ್ರೇಯ ಬಚ್ಚೇಗೌಡ ಅವರ ಕಾಂಬಿನೇಷನ್‍ನಲ್ಲಿ ಈ ಹಿಂದೆ ಜಿಂದಾ ಸಿನಿಮಾ ನಿರ್ಮಾಣವಾಗಿತ್ತು. ಆ ಚಿತ್ರ ಬಿಡುಗಡೆಯಾಗುವ ಮುನ್ನವೇ ಇದೇ ಕಾಂಬಿನೇಷನ್‍ನಲ್ಲಿ ಇದೀಗ ಮತ್ತೆರಡು ಚಿತ್ರಗಳು ಸೆಟ್ಟೇರಿದೆ. ಪ್ರೊಡಕ್ಷನ್ ನಂ.6 ಹಾಗೂ ಪ್ರೊಡಕ್ಷನ್ ನಂ.7 ಹೆಸರಿನಲ್ಲಿ ಆ ಎರಡೂ ಸಿನಿಮಾಗಳು ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ಶುಭಾರಂಭಗೊಂಡಿತ್ತು.  ನಟ ಆದಿತ್ಯ ಹಾಗೂ ರಾಗಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಜಿಂದಾ ಚಿತ್ರದ ನಾಲ್ಕು ಜನ ನಾಯಕರು ಕೂಡ ಅಭಿನಯಿಸುತ್ತಿದ್ದಾರೆ.  ಅಲ್ಲದೆ ನಾಯಕಿ ರಾಗಿಣಿ ಅವರ ಹುಟ್ಟುಹಬ್ಬ ಕೂಡ ಇದೇ ದಿನವಾಗಿದ್ದರಿಂದ ಅವರ ಹುಟ್ಟುಹಬ್ಬದ ಗಿಫ್ಟ್ ಆಗಿ ಈ ಸಿನಿಮಾ ಸೆಟ್ಟೇರಿದೆ. ಅಲ್ಲದೆ ನಿರ್ಮಾಪಕರಾದ ದತ್ತಾತ್ರೇಯ ಬಚ್ಚೇಗೌಡ ದಂಪತಿಗಳ ವಿವಾಹ ವಾರ್ಷಿಕೋತ್ಸವ ಕೂಡ ಈ ದಿನ ಆಗಿದೆ.


 

ಪ್ರೊಡಕ್ಷನ್ ನಂ.7 ಚಿತ್ರದಲ್ಲಿ ಆದಿತ್ಯ ನಾಯಕನಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಪ್ರೊಡಕ್ಷನ್ ನಂ.6 ಚಿತ್ರದಲ್ಲಿ ನಟಿ ಶ್ರಾವ್ಯ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಹಿರಿಯ ನಟ ಶ್ರೀನಿವಾಸಮೂರ್ತಿ, ವಿಜಯಕಾಶಿ, ಸುಂದರರಾಜ್, ಪದ್ಮಾವಾಸಂತಿ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಲವ್, ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾನಕ ಹೊಂದಿರುವ ಈ ಚಿತ್ರವನ್ನು ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಲವ್ ಕ್ರೈಂ ಹಾಗೂ ಥ್ರಿಲ್ಲರ್ ಸುತ್ತ ಸುತ್ತುವ ಕಥೆ ಇದಾಗಿದ್ದು, ವ್ಯಕ್ತಿ, ವ್ಯಕ್ತಿತ್ವ ಹಾಗೂ ಹೆಣ್ಣು ಈ ಮೂವರ ಸುತ್ತ ನಡೆಯುವ ಕಥೆ. ಈ ಕಥಾ ಎಳೆ ಮುಂದಿನ ದಿನಗಳಲ್ಲಿ ದೊಡ್ಡ ವಿಚಾರವಾಗಿ ಬೆಳಕಿಗೆ ಬರಲಿದೆ ಎಂಬ ಮಾಹಿತಿಯನ್ನು ನಿರ್ದೇಶಕ ಮುಸ್ಸಂಜೆ ಮಹೇಶ್‍ಹೇಳಿದರು.

 
ಇನ್ನು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ಮಾತನಾಡಿ, ನಿರ್ದೇಶಕರು ಬಹಳ ಬುದ್ಧಿವಂತರು. ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ಇವರು ನನಗೆ ಹೆಂಡತಿ ಇದ್ದ ಹಾಗೆ. ಪ್ರತಿಯೊಂದು ಮಾತನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿ ಕೆಲಸ ಮಾಡುತ್ತಾರೆ. ಜಿಂದಾ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈಗ ಈ ಎರಡೂ ಚಿತ್ರವನ್ನು ನಿರ್ದೇಶನ ಮಾಡಲು ಒಪ್ಪಿದ್ದೇನೆ. ಮುಂದೆಯೂ ಕೂಡ ಇದೇ ತಂಡದೊಂದಿಗೆ ಇನ್ನೂ ಎರಡು ಸಿನಿಮಾ ನಿರ್ಮಿಸಲು ಸಿದ್ಧನಿದ್ದೇನೆ. ಆದರೆ ನಿರ್ದೆಶಕರು ಒಪ್ಪಬೇಕಷ್ಟೇ ಎಂದು ನಿರ್ದೇಶಕರನ್ನು ಕೊಂಡಾಡಿದರು. ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ಕೈಚಳಕವಿದ್ದು, ಅತಿ ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭಿ ಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin