ಮೂಕ ಯುವತಿ ಮೇಲೆ ನಿರಂತರ ಅತ್ಯಾಚಾರವೆಸಗಿ ಸೋದರಿ ಸಂಬಂಧಿ ಎಸ್ಕೇಪ್
ಮಂಗಳೂರು,ಏ.14- ಮಾತು ಬಾರದ ಯುವತಿ ಮೇಲೆ ನಿರಂತರ ತ್ಯಾಚಾರ ಎಸಗಿ ಆಕೆ ಸೋದರಿ ಸಂಬಂಧಿ ಯುವಕ ಪರಾರಿಯಾಗಿರುವ ಘಟನೆ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಕೊಳ್ಳೆಗಾಲ ಮೂಲದ ಆರೋಪಿ ಮಹೇಶ್ ಎಂಬಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ:
ಸಂತ್ರಸ್ತ ಯುವತಿಯ ಪೋಷಕರು ಕಳೆದ ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದು ಭಾರತಿನಗರದ ಬಳಿ ಮನೆಯೊಂದರಲ್ಲಿ ವಾಸವಾಗಿದ್ದರು. ಈ ವೇಳೆ ಇವರ ದೂರದ ಸಂಬಂಧಿಯಾದ ಮಹೇಶನನ್ನು ಇವರ ಬಳಿಯೇ ಉಳಿಸಿಕೊಂಡಿದ್ದರು. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಆರೋಪಿ ಯುವತಿಯನ್ನು ಬೆದರಿಸಿ ಆಕೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಇತ್ತೀಚೆಗೆ ಮಹೇಶ ಯುವತಿಯನ್ನು ಬೈಯುತ್ತಿದ್ದ ವೇಳೆ ಪೋಷಕರು ಆತನಿಗೆ ಬುದ್ದಿ ಹೇಳಿ ಮನೆಯಿಂದ ಹೊರ ಹಾಕಿದ್ದರು. ನಂತರ ಯುವತಿಯನ್ನು ವಿಚಾರಿಸಿದಾಗ ಈಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿ ತಕ್ಷಣ ಪೋಷಕರು ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಹೇಶನ ಜಾಡು ಹಿಡಿದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.