ಮೂರನೆ ಮದುವೆಗೆ ಯತ್ನಿಸಿ ಪೊಲೀಸರ ಅಥಿತಿಯಾದ

ಈ ಸುದ್ದಿಯನ್ನು ಶೇರ್ ಮಾಡಿ

Arest

ತುಮಕೂರು, ಆ.30- ಈ ಮೊದಲೇ ಎರಡು ಮದುವೆಯಾಗಿರುವುದನ್ನು ಮುಚ್ಚಿಟ್ಟು ಮತ್ತೊಂದು ಮದುವೆ ಮಾಡಿಕೊಳ್ಳಲು ಯತ್ನಿಸಿದ್ದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಶಾಂತಿನಗರದ ಸಾಯಿಬಾಬಾ ಟೆಂಪಲ್ ಸಮೀಪದ ಯುವತಿಯನ್ನು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಬಳಿಯ ಅಂಕಾಪುರದ ನಿವಾಸಿ ಮಹಮ್ಮದ್ ಫೀರ್ ಬಂಧಿತ ಆರೋಪಿ.ಈತ ಎರಡು ಮದುವೆಯಾಗಿರುವುದನ್ನು ಮುಚ್ಚಿಟ್ಟು ಇಂದು ವಕ್ಫ್‍ಬೋರ್ಡ್ ಕಚೇರಿ ಆವರಣದಲ್ಲಿರುವ ಹಜರತ್ ಮದರಸ ಕಲ್ಯಾಣ ಮಂಟಪದಲ್ಲಿ ಮತ್ತೊಂದು ಮದುವೆ ಮಾಡಿಕೊಳ್ಳಲು ದಿನಾಂಕ ನಿಶ್ಚಯವಾಗಿತ್ತು.

ಈ ನಡುವೆ ಗಂಡಿನ ಮನೆಯವರು ರಾತ್ರಿ ಯುವತಿಯ ಅಣ್ಣನಿಗೆ ದಾದಾಫೀರ್ ಎಂಬಾತ ಕರೆ ಮಾಡಿ ಕಲ್ಯಾಣಮಂಪಟಕ್ಕೆ ಬರುವ ಮಾರ್ಗಮಧ್ಯೆ ನಮ್ಮ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಈಗ ಬಂದರೆ ಪೊಲೀಸರು ನಮ್ಮನ್ನು ಬಂಧಿಸುತ್ತಾರೆ. ಮದುವೆಯನ್ನು ಇನ್ನೆರಡು ದಿನ ಮುಂದಕ್ಕೆ ಹಾಕಿ ಎಂದು ಹೇಳಿ ದೂರವಾಣಿಯನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಅಣ್ಣ ಮನೆಯವರಿಗೆ ವಿಷಯ ತಿಳಿಸಿ ಕುಟುಂಬದವರೊಂದಿಗೆ ಅಂಕಾಪುರಕ್ಕೆ ತೆರಳಿದಾಗ ಗಂಡಿನ ಮನೆಯಲ್ಲಿ ಯಾವುದೇ ಮದುವೆಯ ಸಿದ್ಧತೆಯಾಗಲಿ, ನೆಂಟರಿಷ್ಟರಾಗಲಿ ಕಂಡುಬರಲಿಲ್ಲ, ಚಪ್ಪರವನ್ನೂ ಹಾಕಿರಲಿಲ್ಲ. ಇದನ್ನು ಗಮನಿಸಿ ಆತಂಕಗೊಂಡ ಯುವತಿ ಮನೆಯವರು ಸ್ಥಳೀಯರನ್ನು ವಿಚಾರಿಸಿದಾಗ ಮಹಮ್ಮದ್ ಫೀರ್ ಈಗಾಗಲೇ ಮಧುಗಿರಿಯ ಕೊಡಿಗೇನಹಳ್ಳಿ ಗ್ರಾಮದ ನಿವಾಸಿಯನ್ನು ಮದುವೆಯಾಗಿದ್ದು, ಈ ದಂಪತಿಗೆ ಎಂಟು ವರ್ಷದ ಮಗುವಿದೆ. ಅಲ್ಲದೆ, ಈತ ಆಂಧ್ರ ಪ್ರದೇಶದ ಗುಂಟೂರು ಬಳಿಯೂ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆಂಬ ವಿಷಯ ಸಹ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.ಈ ವಿಷಯ ಕೇಳುತ್ತಿದ್ದಂತೆ ಯುವತಿ ಮನೆಯವರಿಗೆ ತಾವು ಮೋಸ ಹೋಗಿದ್ದಾಗಿ ತಿಳಿದು ಚೇಳೂರು ಪೊಲೀಸರಿಗೆ ದೂರು ನೀಡಿ ತಮಗೆ ಮೋಸ ಮಾಡಿದ ವ್ಯಕ್ತಿಯನ್ನು ಹುಡುಕಲಾರಂಭಿಸಿದ್ದಾರೆ.  ವಂಚಕ ಆತನ ಅಣ್ಣ ದಾದಾಫೀರ್ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂಬ ವಿಷಯ ತಿಳಿದು ಹುಡುಗಿಯ ಮನೆಯವರು ಚೇಳೂರಿನ ಜನತಾ ಕಾಲೋನಿಗೆ ತೆರಳಿ ಸ್ಥಳೀಯರನ್ನು ವಿಚಾರಿಸುತ್ತಿದ್ದಾಗ ಎದುರಿಗೆ ಸಿಕ್ಕ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin