ಮೂರನೇ ಕಂತು 300 ರೂ. ಘೋಷಸಿದ ಶಾಸಕ ಲಕ್ಷಣ ಸವದಿ

ಈ ಸುದ್ದಿಯನ್ನು ಶೇರ್ ಮಾಡಿ

ugara kurda

ಉಗಾರ ಖುರ್ದ,ಸೆ.22- ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಭಗೊಂಡ ದಿ.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು 2015-16ನೇ ಸಾಲಿನಲ್ಲಿ ಕಾರಖಾನೆಗೆ ಕಬ್ಬು ಪೂರೈಸಿದ ಬೆಳೆಗಾರರಿಗೆ ಮೂರನೇ ಕಂತಾಗಿ ಪ್ರತಿ ಟನ್ ಕಬ್ಬಿಗೆ 300 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಮಾಜಿ ಸಹಕಾರ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ ಘೋಷಿಸಿದರು.ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 24 ನೇ ವಾರ್ಷಿಕ ಸರ್ವ ಸಾಧಾರಣ ಸಭೈಯಲ್ಲಿ ಮಾತಮಾಡಿದರು.
ಕಬ್ಬು ಪೂರೈಕೆ ಮಾಡಿದ ಕಬ್ಬು ಬೆಳೆಗಾರರಿಗೆ ಇಂದು ಘೋಷಿಸಿದ ಮೂರನೇ ಮತ್ತು ಅಂತಿಮ ಕಂತಾಗಿ 300 ರೂ.ಗಳನ್ನು ನೀಡುವ ಮೂಲಕ ಉತ್ತರ ಕರ್ನಾಟಕದ ಕಬ್ಬು ಬೆಳೆಯುವ ಐದು ಜಿಲ್ಲೆಗಳ ಎಲ್ಲ ಸಕ್ಕರೆ ಕಾರಖಾನೆಗಳು ನೀಡಿದ ದರಕ್ಕಿಂತ ಹೆಚ್ಚಿನ ದರವನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನೀಡಿದೆ ಎಂದ ಅವರು 2016-17 ನೇ ಸಾಲಿಗೆ ಉತ್ತಮ ಇಳುವರಿಯ ಕಬ್ಬನ್ನು ಕಾರಖಾನೆಗೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು. ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ರೈತರ ಅನಕೂಲಕ್ಕಾಗಿ ಕಾರಖಾನೆ ಆವರಣದಲ್ಲಿ ರೈತ ಸಮುದಾಯ ಭವನದ ನಿರ್ಮಾಣ ಕೆಲಸ ಅತೀ ಬೆಗನೆ ಪ್ರಾರಂಭಿಸಬೇಕು ಮತ್ತು ಮುಂದಿನ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಆ ಸಮುದಾಯ ಭವನದಲ್ಲಿಯೇ ಆಯೋಜಿಸಬೇಕು ಎಂದು ಹೇಳಿದರು.
ಕಾರಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಕಾರಖಾನೆಯನ್ನು ಪಾರದರ್ಶಕ ಆಡಳಿತ ನೀಡುವ ಮೂಲಕ ಮತ್ತು ಅತೀ ಹೆಚ್ಚು ದರ ನೀಡಿ ನಡೆಸಿಕೊಂಡು ಬರುತ್ತಿದ್ದೇವೆ ಎಲ್ಲರೂ ಸಹಕಾರ ನೀಡಬೇಕೆಂದರು. ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ ಉದ್ದೇಶಿತ ಉಪ ನಿಯಮಗಳ ತಿದ್ದುಪಡಿಗೆ ಅನುಮೋದನೆಯ ಕುರಿತಾಗಿ ಮಾತನಾಡಿ ಸರ್ವ ಸದಸ್ಯರಿಂದ ಸರ್ವಾನುಮತದಿಂದ ಅನುಮೋದನೆ ಪಡೆದುಕೊಂಡರು.
ಈ ವೇಳೆ ಜ್ಯೋತಗೌಡ ಪಾಟೀಲ, ನಿರ್ದೇಶಕರಾದ ಗುರಬಸು ತೇವರಮನಿ, ಸಿ.ಎಚ್. ಪಾಟೀಲ, ಶಾಂತಿನಾಥ. ನಂದೇಶ್ವರ, ಗುಲಪ್ಪ ಜತ್ತಿ,

 

ಬಸವರಾಜ. ಹಂಜಿ, ಎನ್.ಎಮ್. ತೆಲಸಂಗ, ಆರ್.ಎ. ಪಟ್ಟಣ, ಎನ್.ಡಿ. ಯಕ್ಸಂಬಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ, ಎಸ್.ಬಿ. ಗೋಟಖಿಂಡಿ, ವ್ಹಿ.ಪಿ. ಮನಗೂಳಿ, ಗಜಾನನ ಮಂಗಸೂಳಿ,ಚಿದಾನಂದ ಸವದಿ, ಅಪ್ಪಾಸಾಬ ಅವತಾಡೆ, ವಿಶ್ವನಾಥ ಪೊಲಿಸ್‍ಪಾಟೀಲ, ಸೈಬನ್ನ ಕಮತಗಿ, ಸುರೇಶ ಮಾಯನ್ನವರ, ನಿಂಗಪ್ಪ ಖೋಖಲೆ ಸೇರಿದಂತೆ ಅನೇಕರು ಇದ್ದರು. ಕಛೇರಿ ಅಧಿಕ್ಷಕ ಎಸ್.ಎ.ಠಕ್ಕಣ್ಣವರ ನಡುವಳಿಕೆಗಳನ್ನು ಓದಿದರು. ಎಸ,ಎ,ಗೊಠಕಿಂಡಿ ಲೆಕ್ಕಪತ್ರ ವಿವರಿಸಿ ವಂದಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin