ಮೂರರ ಕರಾಮತ್ತು ತೆರೆಗೆ ಬರಲು ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

3-30-30

ಎರಡು ಸಾವಿರಕ್ಕೂ ಹೆಚ್ಚು ಜಾಹೀರಾತು ಚಿತ್ರಗಳನ್ನು ನಿರ್ಮಾಣ ಮಾಡಿರುವ ಬ್ರೈನ್ ಶೇರ್ ಕ್ರಿಯೇಶನ್ಸ್ ಮೂಲಕ ನಿರ್ಮಾಣ ವಾಗಿರುವ ಮೊದಲ ಚಿತ್ರ 3 ಗಂಟೆ, 30 ದಿನ, 30 ಸೆಕೆಂಡ್ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ವರ್ಷದ ಮೊದಲ ಕೊಡುಗೆಯಾಗಿ ಜ.5ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಯುವ ವಕೀಲ ಹಾಗೂ ಟಿವಿ ಛಾನೆಲ್ ಮುಖ್ಯಸ್ಥನ ಮಗಳ ನಡುವೆ ನಡೆಯುವಂಥ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹಿರಿಯ ಕಲಾವಿದರಾದ ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್ ಪ್ರಮುಖ ಪಾತ್ರ ಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಅರುಗೌಡ ಹಾಗೂ ಕಾವ್ಯಶೆಟ್ಟಿ ಪ್ರಧಾನಪಾತ್ರ ನಿರ್ವಹಿಸಿದ್ದಾರೆ.

ಚಿತ್ರದ ವಿಶೇಷತೆಗಳ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರ ತಂಡ ಮೊನ್ನೆ ಪತ್ರಿಕಾಗೋಷ್ಠಿ ಏರ್ಪಡಿಸಿತ್ತು. ನಿರ್ಮಾಪಕ ಚಂದ್ರಶೇಖರ ಪದ್ಮಶಾಲಿ ನಿರ್ದೇಶಕ ಆರ್.ಮದುಸೂದನ್, ನಟಿ ಸುಧಾರಾಣಿ, ಅರುಗೌಡ, ಸಂಗೀತ ನಿರ್ದೇಶಕ ಶ್ರೀಧರ್ ಎ.ಸಂಭ್ರಮ ಹಾಜರಿದ್ದು, ಒಂದಷ್ಟು ಮಾಹಿತಿಗಳನ್ನು ನೀಡಿದರು. ವಿಜಯ ಸಿನಿಮಾಸ್ ಮೂಲ ಈ ಚಿತ್ರ ಬಿಡುಗಡೆ ಯಾಗುತ್ತಿದ್ದು, ವಿತರಕ ವಿಜಯ್ ಕುಮಾರ್ ಕೂಡ ಹಾಜರಿದ್ದರು.

ನಿರ್ದೇಶಕ ಮಧುಸೂದನ್ ಮಾತನಾಡಿ, ನಮ್ಮ ಚಿತ್ರವನ್ನು ಕೆಲವರಿಗೆ ಈಗಾಗಲೇ ತೋರಿಸಿ ಅವರ ಅಭಿಪ್ರಾಯ ಪಡೆದು ಕೊಂಡಿದ್ದೇವೆ. ಜನರನ್ನು ರಂಜಿಸುವ ಕಂಟೆಂಟ್ ಚಿತ್ರದಲ್ಲಿದೆ ಎಂದು ಎಲ್ಲರೂ ಮೆಚ್ಚುಕೊಂಡಿದ್ದಾರೆ. ಈ ಹಿಂದೆ ರಿಲೀಸಾಗಿದ್ದ ಟೀಸರ್‍ಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಹಿರಿಯ ಕಲಾವಿದರ ಯುವ ಕಲಾವಿದರ ಸಂಗಮವಾಗಿ ಈ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದರು. ನಾಯಕ ಅರುಗೌಡ ಮಾತನಾಡಿ, ಇದು ನನ್ನ 2ನೇ ಚಿತ್ರ. ನಿರ್ದೇಶಕರು ಸಿನಿಮಾಗೆ ಹೊಸಬರದಾರೂ … ಫಿಲಂಗಳಲ್ಲಿ ಅನುಭವ ಹೊಂದಿದವರು. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎಂದು ಹೇಳಿದರು. ನಟಿ ಸುಧಾರಾಣಿ ಮಾತನಾಡಿ, ಸ್ಟೇಮೇಕ್ ಸಿನಿಮಾ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆ ಯಾಗ್ತಿದೆ. ನನ್ನದು ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಮೂಡಿ ಬಂದಿದೆ. ಇಂಥ ಒಳ್ಳೆ ನಿರ್ಮಾಪಕರು ಚಿತ್ರರಂಗಕ್ಕೆ ಹೆಚ್ಚಾಗಿ ಬರಬೇಕು ಎಂದು ಹೇಳಿದರು.

Facebook Comments

Sri Raghav

Admin