ಮೂರಾರ್ಜಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

bailahongala

ಬೈಲಹೊಂಗಲ,ಮಾ.28- ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ವಸತಿ ನಿಲಯಗಳನ್ನು ತೆರೆದು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವುಗಳ ಉಪಯೋಗ ಪಡೆದು ಸಮಾಜದಲ್ಲಿ ಉನ್ನತ ಗುರಿ ಮುಟ್ಟಿ ರಾಷ್ಟ್ರದ ಅಭ್ಯುದಯಕ್ಕೆ ಪ್ರಯತ್ನಿಸಬೇಕು ಎಂದು ಮತಕ್ಷೇತ್ರದ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಹಮ್ಮಿಕೊಂಡ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಶ್ರಯದಲ್ಲಿ ನಡೆದ ಮೊರಾರ್ಜಿ ಶಾಲೆಯ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಾಜದಲ್ಲಿ ಅನೇಕ ಅವಕಾಶಗಳಿದ್ದು, ಉತ್ತಮ ಕೌಶಲ್ಯದಿಂದ ಇಡೀ ಜಗತ್ತನ್ನೇ ಗೆಲ್ಲಬಹುದಾಗಿದೆ. ಈಗಾಗಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ವ್ಯಾಸಂಗವನ್ನು ವ್ಯರ್ಥ ಮಾಡದೇ ಸಂಸ್ಕ್ರತಿ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉನ್ನತ ಗುರಿ ಮುಟ್ಟಲು ಪ್ರಯತ್ನಿಸಬೇಕು ಎಂದರು.

ಗ್ರಾಮದ ರಂಗಭೂಮಿ ಕಲಾವಿದ ಸಿ.ಕೆ. ಮೆಕ್ಕೇದ ಮಾತನಾಡಿ, ಇಂಥಹ ಆದರ್ಶ ಶಾಲೆಗಳಲ್ಲಿ ಕಲಿತಂಥ ವಿದ್ಯಾರ್ಥಿಗಳು ದೇಶದ ಭವಿಷ್ಯಕ್ಕೆ ಪ್ರೇರಕವಾಗಬೇಕಾಗಿದ್ದು, ಗಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ವಸತಿ ನಿಲಯ ಪ್ರಾರಂಭಿಸಲು ಮತಕ್ಷೇತ್ರದ ಶಾಸಕರು, ಗ್ರಾಪಂ ಆಡಳಿತ ಮಂಡಳಿಯ ಕಾರ್ಯ ಮೆಚ್ಚುವಂತದ್ದಾಗಿದ್ದು, ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದ್ದು, ಇಂದು ಹಲವಾರು ಕ್ಷೇತ್ರಗಳು ನಿರುದ್ಯೋಗಿಗಳನ್ನು ಉದ್ಯೋಗಕ್ಕಾಗಿ ಕೈ ಬಿಸಿ ಕರೆಯುತ್ತಿವೆ ಎಂದರು.ಜಿಪಂ ಸದಸ್ಯ ಈರಣ್ಣ ಕರೀಕಟ್ಟಿ, ತಾಪಂ ಸದಸ್ಯ ಬಸನಗೌಡಾ ಪಾಟೀಲ, ಗ್ರಾಪಂ ಅಧ್ಯಕ್ಷ ಪರ್ವತಗೌಡಾ ಪಾಟೀಲ, ಗುತ್ತಿಗೆದಾರ ಲಕ್ಷ್ಮೀ ನಾರಾಯಣ, ಊರಿನ ಹಿರಿಯ ಎಸ್.ಬಿ. ಅಂಗಡಿ, ಗ್ರಾಪಂ ಸದಸ್ಯರಾದ ನಾಗನಗೌಡಾ ಸಂಕಪ್ಪನವರ, ಪ್ರಕಾಶ ಹಂಪಣ್ಣವರ, ಭಿಮಣ್ಣ ಮುರಗೋಡ, ಸ್ನೇಹಾ ಶರಣ್ಣನವರ, ಮಲ್ಲವ್ವಾ ಪಠಾತ, ಈರನಗೌಡಾ ಶೀಲವಂತರ, ಬಿ.ಬಿ. ಪಾತಿಮ್, ವಸತಿ ನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin