ಮೂರು ಕರಡಿಗಳ ಏಕಾಏಕಿ ದಾಳಿ : ವೃದ್ಧನ ಸ್ಥಿತಿ ಚಿಂತಾಜನಕ

ಈ ಸುದ್ದಿಯನ್ನು ಶೇರ್ ಮಾಡಿ

 

Bear

ಮಧುಗಿರಿ, ಮೇ 18- ವೃದ್ಧರೊಬ್ಬರ ಮೇಲೆ ಮೂರು ಕರಡಿಗಳು ಎರಗಿದ ಪರಿಣಾಮ ವೃದ್ಧನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲ್ಲೂಕಿನ ಗಂಪನಹಳ್ಳಿಯಲ್ಲಿ ನಡೆದಿದೆ. ರಾಮಣ್ಣ (72) ಕರಡಿ ದಾಳಿಗೆ ಒಳಗಾದ ವೃದ್ಧ.ರಾತ್ರಿ ಜಮೀನಿನಿಂದ ಮನೆಗೆ ಬರುವಾಗ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿವೆ. ಈ ಸಂದರ್ಭದಲ್ಲಿ ವೃದ್ಧ ಕೂಗಿಕೊಂಡಿದ್ದು ಅಕ್ಕಪಕ್ಕದ ತೋಟದ ಮನೆಯವರು ಗಲಾಟೆ ಮಾಡಿ ಲೈಟಿನ ಬೆಳಕು ಬಿಟ್ಟಾಗ ಅಲ್ಲಿಂದ ಪರಾರಿಯಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಣ್ಣನನ್ನು ಸ್ಥಳೀಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಪದೇ ಪದೇ ಕರಡಿಗಳ ದಾಳಿ ಮುಂದುವರೆದಿದ್ದು, ಕರಡಿಗಳಿಂದ ಶಾಶ್ವತ ಪರಿಹಾರ ದೊರಕಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin