ಮೂರು ಕರುಗಳಿಗೆ ಜನ್ಮನೀಡಿದ ಹಸು, ಆದರೆ ಒಂದೂ ಬದುಕಲಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

CHANNAPATANA

ಚನ್ನಪಟ್ಟಣ, ಸೆ.2- ಮೂರು ಕರುಗಳಿಗೆ ಜನ್ಮ ನೀಡಿದ ಅರ್ಧ ತಾಸಿನಲ್ಲಿಯೇ ಜನ್ಮ ಪಡೆದ ಮುದ್ದಾದ ಕರುಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಂಡೂರ ವರೆಗೇರಹಳ್ಳಿಯಲ್ಲಿ ನಡೆದಿದೆ.ಗ್ರಾಮದ ಸೋಮೇಗೌಡ ಎಂಬುವರ ಎಚ್.ಎಫ್.ಸೀಮೆ ಹಸು ಗರ್ಭ ಧರಿಸಿದ್ದು ಕೆಲ ದಿನಗಳ ಹಿಂದೆ ಎರಡು ಗಂಡು ಹಾಗೂ ಒಂದು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಮುಂಜಾನೆ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಒಂದೊಂದು ಕರುವಿಗೆ ಜನ್ಮ ನೀಡಿದ್ದು ಜನ್ಮ ನೀಡಿದ ಅರ್ಧ ತಾಸುಗಳ ಅಂತರದಲ್ಲಿಯೇ ಮೂರು ಕರುಗಳು ಇಹಲೋಕ ತ್ಯಜಿಸಿರುವುದರಿಂದ ಮಾಲೀಕನಿಗೆ ಮಾನಸಿಕವಾಗಿ ನೋವುಂಟಾಗಿದೆ.

ಈ ರೀತಿಯ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಶು ವೈದ್ಯರು ಒಂದು ಕರುವು ಇರಲು ಅವಕಾಶವಿರುವ ತಾಯಿ ಹೊಟ್ಟೆಯಲ್ಲಿ ಏಕಕಾಲದಲ್ಲಿ ಮೂರು ಕರುಗಳು ಇರುವುದರಿಂದ ದುಸ್ಸರವಾಗಿದ್ದು ಈ ಘಟನೆಯಿಂದ ತಾಯಿ ಹಸು ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿರುವುದೇ ಒಂದು ಪವಾಡವಿದ್ದಂತೆ ಎಂದು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin