ಮೂರು ದಶಕಗಳ ರೈಲಿನ ಕನಸು, ಬೀದರ್ ಜನತೆ ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

Bidar--02

ಕಲಬುರಗಿ, ಅ.29-ಮೂರು ದಶಕಗಳ ಕನಸು ನನಸಾಗುವ ಮೂಲಕ ಬೀದರ್ ಜನತೆ ಸಂತಸ ವ್ಯಕ್ತಪಡಿಸಿದರು. ಬೀದರ್‍ನಿಂದ ಕಲಬುರಗಿಗೆ ರೈಲು ಓಡಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಧ್ಯುಕ್ತವಾಗಿ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಬೀದರ್-ಕಲಬುರಗಿ ಜನ ರೈಲಿಗಾಗಿ ಕಾದು ಕುಳಿತಿದ್ದು ವಿಶೇಷವಾಗಿತ್ತು. ಕಲಬುರಗಿ ಮತ್ತು ಬೀದರ್ ರೈಲು ಇಂದು ನಿನ್ನೆಯದಲ್ಲ. 30 ವರ್ಷಗಳ ಬೇಡಿಕೆ. 1999ರಲ್ಲಿ 383 ಕೋಟಿ ರೂ. ವೆಚ್ಚದಲ್ಲಿ 110.4 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ ತೋರಲಾಗಿತ್ತು. ಆದರೆ ಈ ಯೋಜನೆ ಸಮರ್ಪಕ ಅನುದಾನ ಸಿಗದ ಕಾರಣ ಕುಂಟುತ್ತಾ, ತೆವಳುತ್ತಾ ಸಾಗಿತ್ತು.

ಕಲಬುರಗಿ ಜಿಲ್ಲೆಯವರಾದ ಮಲ್ಲಿಕಾರ್ಜುನ್ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಅಗತ್ಯ ಅನುದಾನ ಬಿಡುಗಡೆಯಾಗಿ ಈ ಕಾಮಗಾರಿಗೆ ವೇಗ ದೊರೆಯಿತು. ಈ ಯೋಜನೆ ಸಂಪೂರ್ಣಗೊಂಡಿದ್ದು, ಒಟ್ಟು 259 ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಚಾಲನೆ ನೀಡಲಿದ್ದಾರೆ.

Facebook Comments

Sri Raghav

Admin