ಮೂರ್ಛೆ ರೋಗಕ್ಕೆ ಔಷಧಿ ಕೊಡಲು ಬಂದವ, 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಿಲಾಡಿ ಬಾಬಾ

ಈ ಸುದ್ದಿಯನ್ನು ಶೇರ್ ಮಾಡಿ

baba
ಆನೇಕಲ್. ನ. 23 – ಮೂರ್ಛೆ ರೋಗ ಇನ್ನಿತರ ಖಾಯಿಲೆಗಳಿಗೆ ಔಷಧಿ ನೀಡುವುದಾಗಿ ಮಾರುವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನ ಆಭರಣಗಳನ್ನು ಕದ್ದು ಪರಾರಿಯಾದ ಘಟನೆ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿತ್ತಗಾನಹಳ್ಳಿ ಗ್ರಾಮದ ಲಕ್ಷ್ಮಿದೇವಿ ಕೃಷ್ಣಮೂರ್ತಿರವರ ಮನೆಗೆ ಬೆಳಗಿನ ಜಾವದಲ್ಲಿ ಇಬ್ಬರು ಮಹಿಳೆಯರು ಬಂದು ಮೂರ್ಛೆ ಕಾಯಿಲೆಗಳಿಗೆ ಔಷಧಿ ನೀಡುವುದಾಗಿ ಹೇಳಿ ಹೊರಟ ನಂತರ ಇನ್ನೋರ್ವ ಮಾರು ವೇಷದ ಬಾಬಾ ಯಥಾವತ್ತಾಗಿ ಮೂರ್ಛೆ ಕಾಯಿಲೆಗೆ ಔಷಧಿ ಮತ್ತು ಮಾಟ ಮಂತ್ರಗಳಿಗೆ ವಿಶೇಷವಾದ ಪೂಜೆ ಮಾಡುವುದಾಗಿ ಮನೆಯೊಳಗೆ ಪ್ರವೇಶಿಸಿದ್ದು, ಪೂಜೆ ಮಾಡುತ್ತಾ ರಾಸಾಯನಿಕ ವಸ್ತು ಬಳಸಿ ಮನೆಯಲ್ಲಿದ್ದ ಸದಸ್ಯರ ಪ್ರಜ್ಞೆ ತಪ್ಪಿಸಿದ್ದಾನೆ. ನಮ್ಮೆಲ್ಲರನ್ನು ಪ್ರಜ್ಞೆ ಇಲ್ಲದಂತೆ ಮಾಡಿ ಸುಮಾರು ಐದು ಲಕ್ಷ ಮೌಲ್ಯದ ಆಭರಣಗಳು ಮತ್ತು 15 ಸಾವಿರ ರೂಪಾಯಿ ಹಣವನ್ನು ದೋಚಿ ಕಳ್ಳ ಬಾಬ ಪರಾರಿಯಾದ ಎಂದು ಲಕ್ಷ್ಮಿದೇವಿ ಸಂಬಂಧಿ ಪತ್ರಿಕೆಗೆ ತಿಳಿಸಿದ್ದಾರೆ.

Facebook Comments

Sri Raghav

Admin