ಮುಂಬೈ ಮೂಲದ ಉದ್ಯಮಿ ಜೊತೆ ನಿಖಿತಾ ಮದುವೆ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

nikhitha

ಮುಂಬೈ, ಅ.5- ಬಹುಭಾಷಾ ನಟಿ ನಿಖಿತಾ ತುಕ್ರಾಲ್ ಸದ್ದಿಲ್ಲದೆ ಸಪ್ತಪದಿ ತುಳಿಯಲಿದ್ದಾರೆ. ಮುಂಬೈ ಮೂಲದ ಉದ್ಯಮಿ ಗಗನ್‍ದೀಪ್ ಸಿಂಗ್ ಜತೆ ನಿಖಿತಾ ಮದುವೆಯಾಗಲಿದ್ದಾರೆ. ವಾಣಿಜ್ಯ ನಗರಿ ಮುಂಬೈನ ಫೈವ್‍ಸ್ಟಾರ್ ಹೊಟೇಲ್‍ನಲ್ಲಿ ಇದೇ ಶನಿವಾರ ಹಾಗೂ ಭಾನುವಾರದಂದು ಅದ್ಧೂರಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇದೇ ಗುರುವಾರ ಮೆಹೆಂದಿ ಕಾರ್ಯಕ್ರಮವಿದ್ದು ಇದರಲ್ಲಿ ಪಾಲ್ಗೊಳ್ಳಲು ಕೆಲವೆ ಕೆಲವರನ್ನು ಆಹ್ವಾನಿಸಲಾಗಿದೆ.  ಈಗಾಗಲೇ ನಿಖಿತಾ ಕುಟುಂಬದವರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಮುಂಬೈ ತಲುಪಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಈ ಸುದ್ದಿ ಹರಿದಾಡುತ್ತಿದ್ದು, ಸಿನಿ ಪ್ರಿಯರನ್ನು ಆಕರ್ಷಿಸಿದೆ.

ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟ ದರ್ಶನ್ ಜತೆ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಿಖಿತಾ, ಪುನಿತ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಹಲವಾರು ನಾಯಕರ ಜತೆ ನಟಿಸಿದ್ದಾರೆ. ರಾಜ್ಯದ ಜನಮನ ಗೆದ್ದಿರುವ ಕನ್ನಡದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ನಿಖಿತಾ ಸ್ಪರ್ಧಿಸಿದ್ದರು.

NikhitazdgvSZDG

ಕನ್ನಡದಲ್ಲಿ ಪ್ರಮುಖ ನಾಯಕ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಿಖಿತಾ ಬಿಗ್ ಬಾಸ್ ರಿಯಾಲಿಟಿ ಷೋ ನಲ್ಲೂ ಭಾಗವಹಿಸಿ ಕನ್ನಡಿಗರ ಮನೆಮಾತಾಗಿದ್ದರು. ಜೊತೆ  ಹಲವು ವಿವಾದಗಳು ಕೂಡ ನಿಖಿತಾರ ನ್ನು ಸುತ್ತಿಕೊಂಡು ಸುದ್ದಿಯಾಗಿದ್ದರು .

► Follow us on –  Facebook / Twitter  / Google+

Facebook Comments

Sri Raghav

Admin