ಮೂವರು ಸರಗಳ್ಳರ ಬಂಧನ : 5.10 ಲಕ್ಷ ಮೌಲ್ಯದ ಸರಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

Arrested-01
ಬೆಂಗಳೂರು, ಅ.25- ಮಹಿಳೆಯರನ್ನು ಹಿಂಬಾಲಿಸಿ ಸರಗಳನ್ನು ಎಗರಿಸುತ್ತಿದ್ದ ಮೂವರು ಸರಗಳ್ಳರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿ 5.10 ಲಕ್ಷ ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.ಮೋಹನ್ (21), ಶಿವರಾಜ್ (21) ಮತ್ತು ಮಹಮದ್ ನದೀಂ (21) ಬಂಧಿತ ಸರಗಳ್ಳರು.ಈ ಸರಗಳ್ಳರು ಒಂಟಿ ಯಾಗಿ ಹೋಗುವ ಮಹಿಳೆ ಯರು, ವಾಯು ವಿಹಾರ ಮಾಡುವವರನ್ನು ಗುರಿ ಯಾಗಿಟ್ಟುಕೊಂಡು ಬೈಕ್‍ನಲ್ಲಿ ಸುತ್ತಾಡುತ್ತಾ ಸರಗಳ್ಳತನ ಮಾಡುತ್ತಿದ್ದರು.

ನಗರದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಸರಗಳ್ಳತನ ನಡೆಯುತ್ತಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಮೂವರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳ ಬಂಧನದಿಂದ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಮಾಂಗಲ್ಯ ಸರ ಅಪಹರಣ ಪ್ರಕರಣ ಹಾಗೂ ಒಂದು ಸರ ಅಪಹರಣ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ 5 ಲಕ್ಷ ರೂ. ಬೆಲೆಯ 4 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin