ಮೂವರು ಸಹೋದ್ಯೋಗಿಗಳನ್ನು ಕೊಂದು ಬಿಎಸ್‍ಎಫ್ ಯೋಧ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

BSF-Killed
ಅಗರ್ತಲಾ, ಮೇ 6- ಗಡಿ ಭದ್ರತಾಪಡೆಯ (ಬಿಎಸ್‍ಎಫ್) ಯೋಧನೊಬ್ಬ ಇಂದು ಮುಂಜಾನೆ ಮನಬಂದಂತೆ ಗುಂಡು ಹಾರಿಸಿ ತನ್ನ ಮೂವರು ಸಹೋದ್ಯೋಗಿಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುನಕೋಟಿ ಜಿಲ್ಲೆಯ ಮಗರೂಲಿ ಗಡಿ ಪೋಸ್ಟ್ ನಲ್ಲಿ ನಡೆದಿದೆ.  ಮುಂಜಾನೆ 1 ಗಂಟೆ ಸಂದರ್ಭದಲ್ಲಿ ಯೋಧನೊಬ್ಬ ತನ್ನ ಜೊತೆಯಲ್ಲಿಯೇ ಕಾವಲು ಕಾಯುತ್ತಿದ್ದ ಹೆಡ್‍ಕಾನ್‍ಸ್ಟೆಬಲ್ ಸೇರಿದಂತೆ ಮತ್ತಿಬ್ಬರ ಮೇಲೆ ಗುಂಡಿನ ಸುರಿಮಳೆಗರೆದು ನಂತರ ತಾನೂ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಬಿಎಸ್‍ಎಫ್‍ನ ವಿಶೇಷ ಘಟಕದ ಅಧಿಕಾರಿ ಶಂಕರ್ ದಿಬನಾಥ್‍ತಿಳಿಸಿದ್ದಾರೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin