ಮೂವರ ದರೋಡೆಕೋರರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

3-Arrest
ಬೆಂಗಳೂರು, ಮಾ.3- ದರೋಡೆ ಮಾಡಿ ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದ ರಿಜೋರಿಯ ಅಲಿಯಾಸ್ ತುಳುಮ್(19), ಅಜಯ್ ಅಲಿಯಾಸ್ ಕುಮಾರ್(18), ಶಿವಾಜಿನಗರದ ಮೊಹಮ್ಮದ್ ಅವೇಜ್(22) ಬಂಧಿತ ಆರೋಪಿಗಳು. ಬಂಧಿತರಿಂದ 50 ಸಾವಿರ ರೂ. ಬೆಲೆ ಬಾಳುವ ವಿವಿಧ ಕಂಪೆನಿಗಳ ಮೂರು ಮೊಬೈಲ್‍ ಫೋನ್, ವ್ಯಾನಿಟಿಬ್ಯಾಗ್, ಎಟಿಎಂ ಕಾರ್ಡ್ ಹಾಗೂ 4 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಮೂರು ದರೋಡೆ ಪ್ರಕರಣಗಳನ್ನು ಶೀಘ್ರದಲ್ಲೇ ಭೇದಿಸಿ ಈ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೆ.ಸಿ.ನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಗಿರೀಶ್ ನಾಯ್ಕ್ ನೇತೃತ್ವದಲ್ಲಿ ಪಿಎಸ್‍ಐ ವಿನೋದ ಜಿರಗಾಳೆ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Facebook Comments

Sri Raghav

Admin