ಮೃತ ಆಪ್ತ ಸಹಾಯಕನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ನಟ ಸುದೀಪ್

ಈ ಸುದ್ದಿಯನ್ನು ಶೇರ್ ಮಾಡಿ

Sudeep-01
ಹಿರಿಯೂರು, ಡಿ.28- ಆಪ್ತ ಸಹಾಯಕನ ಮಗಳ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಟ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಗ್ರಾಮದ ಜನರಷ್ಟೆ ಅಲ್ಲದೆ ಸುತ್ತಮುತ್ತಲ ಗ್ರಾಮದ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಂಡರು ಶಿರಾ ತಾಲೂಕಿನ ಗಡಿ ಗ್ರಾಮದಲ್ಲಿ ದಂಡಿಕೆರೆಯ ಧನಂಜಯ ಸುದೀಪ್‍ರವರ ಆಪ್ತ ಸಹಾಯಕನಾಗಿ ಕೆಲಸ ಮಾಡಿ 2011ರಲ್ಲಿ ಮೃತಪಟ್ಟದ್ದು . ಅವರು ಪುತ್ರಿಯಾದ ಡಿ.ಡಿ.ಚಿಂದನಾಳ 7 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸುದೀಪ್ ಭಾಗವಹಿಸಿದರು ಮೃತ ಧನಂಜಯನ ತಮ್ಮನಾದ ಪಾರ್ಥ ಈಗ ಸುದೀಪ್‍ರವರು ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ಹೆಬ್ಬುಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ದಾವಣಗೆರೆ ತೆರಳುವಾಗ ಗ್ರಾಮಕ್ಕೆ ಆಗಮಿಸಿದರು.

ನಟ ಸುದೀಪ್ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಗ್ರಾಮಕ್ಕೆ ಆಗಮಿಸಿದರು ನಟನನ್ನು ನೋಡಲು ಮುಗಿಬಿದ್ದರು ಗ್ರಾಮಕ್ಕೆ ಆಗಮಿಸಿದ ನಟನಿಗೆ ಪಾಥ್ ಕುಟುಂಬದವರು ಆರತಿಬೆಳಗಿ ಸ್ವಾಗತಿಸಿದರು ಗ್ರಾಮದ ಜನತೆ ಡೊಳ್ಳು ಕುಣಿತದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಾಲಿಂಗಯ, ಉಪ್ಪಳಗೆರೆ ಮಂಜುನಾಥ್, ದೇವರಾಜ್, ವಾಲ್ಮೀಕಿ ಯುವಕ ಸಂಘದ ಮುಖಂಡ ಸಂತೋಷ ನಿಜಲಿಂಗಪ್ಪ, ಭರತ ದೇವರಾಜ್ ಮಹಂತೇಶ್ ಭೂತಣ್ಣ ನರಸಿಂಹಮೂರ್ತಿ ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin