ಮೃತ ಕುಟುಂಬಕ್ಕೆ ಚೆಕ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

cheque

ಕೆ.ಆರ್.ಪೇಟೆ,ಅ.6- ಜಮೀನಿನ ಬಳಿ ಕೃಷಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದ ತಾಲೂಕಿನ ಬೂಕನಕೆರೆ ಹೋಬಳಿಯ ಐಚನಹಳ್ಳಿ ಗ್ರಾಮದ ರೈತ ದಿ.ಗಿರೀಶ್ ಅವರ ಪತ್ನಿ ಅಶ್ವಿನಿ ಅವರಿಗೆ ಕೃಷಿ ಮಾರುಕಟ್ಟೆ ಇಲಾಖೆಯ ರೈತ ಸಂಜೀವಿನಿ ಯೋಜನೆಯಿಂದ ಬಿಡುಗಡೆಯಾಗಿದ್ದ 1 ಲಕ್ಷ ರೂ.ಗಳ ಚೆಕ್‍ನ್ನು ತಹಶೀಲ್ದಾರ್ ಕೆ.ರತ್ನ ವಿತರಣೆ ಮಾಡಿದರು. 2016ನೇ ಮೇ 10ರಂದು ತಮ್ಮ ಜಮೀನಿನ ಬಳಿ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದ ರೈತ ಗಿರೀಶ್ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದರು.

ಇದರಿಂದ ರಾಜ್ಯ ಸರ್ಕಾರದ ಕೃಷಿ ಉತ್ಪನ್ನ ಮಾರಾಟ ಇಲಾಖೆಯಿಂದ ರೈತ ಸಂಜೀವಿನಿ ಯೋಜನೆಯಡಿಯಲ್ಲಿ ಕೊಡಲಾಗುವ ಪರಿಹಾರ ಈ ಚೆಕ್ ಬಿಡುಗಡೆಯಾಗಿತ್ತು. ಈ ಚೆಕ್ ವಿತರಣೆ ಮಾಡಿದ ಎಪಿಎಂಸಿ ಆಡಳಿತಾಧಿಕಾರಿಗಳೂ ಆದ ತಹಸೀಲ್ದಾರ್ ರತ್ನಾ, ಮೃತ ರೈತ ಮಕ್ಕಳ ವಿದ್ಯಾಭ್ಯಾಸದ ಉದ್ದೇಶಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕ ಯೋಗಾನಂದ, ಎಪಿಎಂಸಿ ನಿರ್ದೇಶಕ ಶಿವಣ್ಣ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ರವಿಕುಮಾರ್ ಇತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin