ಮೃತ ಟೆಕ್ಕಿ ಶ್ರೀನಿವಾಸ ಕಚ್ಚಿಬೋಟ್ಲಾ ಪತ್ನಿಗೆ ತಾತಾಲ್ಕಿಕ ವೀಸಾ

ಈ ಸುದ್ದಿಯನ್ನು ಶೇರ್ ಮಾಡಿ

Srinivas

ವಾಷಿಂಗ್ಟನ್, ಸೆ.14-ಜನಾಂಗೀಯ ವಿದ್ವೇಷಕ್ಕೆ ಬಲಿಯಾದ ಆಂಧ್ರಪ್ರದೇಶ ಮೂಲದ ಶ್ರೀನಿವಾಸ ಕಚ್ಚಿಬೋಟ್ಲಾ ಅವರ ಪತ್ನಿಗೆ ಅಮೆರಿಕದ ತಾತ್ಕಾಲಿಕ ಕೆಲಸದ ವೀಸಾ ಲಭಿಸಿದೆ. ಅಮೆರಿಕದ ಪ್ರಭಾವಿ ಸಂಸದ ಕೆವಿನ್ ಯೋಡೆರ್ ಅವರ ನೆರವಿನಿಂದ ಇದು ಸಾಧ್ಯವಾಗಿದೆ. ಕಳೆದ ಫೆಬ್ರವರಿಯಲ್ಲಿ ಕಾನ್ಸಾಸ್ ಬಾರೊಂದರಲ್ಲಿ ಶ್ರೀನಿವಾಸ(32) ಅವರನ್ನು ಜನಾಂಗೀಯ ದ್ವೇಷಕ್ಕಾಗಿ ಹಂತಕನೊಬ್ಬ ಗುಂಡು ಹಾರಿಸಿ ಕೊಂದಿದ್ದ.

https://goo.gl/Dau7Dz

ಈ ಘಟನೆ ನಂತರ ಅವರ ಪತ್ನಿ ಸುನಯನ ಡುಮಾಲಾ ಅವರು ಅಮೆರಿಕದಲ್ಲಿ ತಮ್ಮ ವಾಸ್ತವ್ಯ ಹಕ್ಕನ್ನು ಕಳೆದುಕೊಂಡಿದ್ದರು. ಕೆವಿನ್ ಯೋಡೆರ್ ಅವರು ನಡೆಸಿದ ಕಾನೂನು ಹೋರಾಟದ ಫಲವಾಗಿ ಅವರು ಮುಂದಿನ ಪರ್ಯಾಯ ವ್ಯವಸ್ಥೆವರೆಗೆ ಅಮೆರಿಕದಲ್ಲಿ ತಾತ್ಕಾಲಿಕವಾಗಿ ನೆಲೆಸಲು ವೀಸಾ ದೊರೆತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin