ಮೆಕ್ಸಿಕೋದಲ್ಲಿ ವಿಭಿನ್ನ ಮೂಲಂಗಿ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

Rediah

ಇದು ಮೆಕ್ಸಿಕೋದಲ್ಲಿ ನಡೆದ ಮೂಲಂಗಿ ಉತ್ಸವ. ಪ್ರತಿ ವರ್ಷ ಅಲ್ಲಿ ದಿ ನೈಟ್ ಆಫ್ ರ್ಯಾಡಿಶ್ಸ್ ಉತ್ಸವ ನಡೆಯುತ್ತದೆ. ಈ ಆಚರಣೆಗೆ ತನ್ನದೇ ಆದ ಇತಿಹಾಸವಿದೆ. ಪ್ರತಿ ವರ್ಷ, ತೋಟಗಾರರು ಮತ್ತು ಕಲಾವಿದರು ಮೂಲಂಗಿ ಉತ್ಸವದಲ್ಲಿ ಒಟ್ಟಿಗೆ ಪಾಲ್ಗೊಳ್ಳುತ್ತಾರೆ. ವಿವಿಧ ಗಾತ್ರಗಳು ಮತ್ತು ತಳಿಗಳ ಮೂಲಂಗಿಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಧಾರ್ಮಿಕದಿಂದ ರಾಜಕೀಯದವರೆಗೆ ವಿವಿಧ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಸಂಕೀರ್ಣ ಕೆತ್ತನೆಯ ವಿನ್ಯಾಸಗಳ ಪ್ರದರ್ಶನಕ್ಕೆ ಇದು ವೇದಿಕೆಯಾಗಿತ್ತು.ಮೆಕ್ಸಿಕೋದ ಓಕ್ಸಾಕಾದ ಸೆಂಟ್ರಲ್ ಸ್ಕ್ವೇರ್‍ನಲ್ಲಿ ನಡೆದ 119ನೇ ಮೂಲಂಗಿ ಸಂಜೆಯನ್ನು ಕಣ್ತುಂಬಿಕೊಳ್ಳಲು ನೂರಾರು ವೀಕ್ಷಕರು ಅಲ್ಲಿ ನೆರೆದಿದ್ದರು. ತಮ್ಮ ಉತ್ಪನ್ನಗಳಿಗೆ ವಿಶೇಷ ಮೆರುಗು ನೀಡಿದ ಕಲಾವಿದ ಕಲಾ ನೈಪುಣ್ಯವನ್ನು ಇವರೆಲ್ಲ ಸಾಕ್ಷೀಕರಿಸಿದರು.   ಮೆಕ್ಸಿಕೋದ ದೇಶೀಯ ಕೃಷಿ ಉದ್ಯಮದಿಂದ ಇದು ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ವರ್ಣರಂಜಿತ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ. ಈ ವರ್ಷ 150 ತೋಟಗಾರರು ಮತ್ತು ಕಲಾವಿದರು ತಮ್ಮ ಬೆಳೆಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿ ಜನಮನ ಗೆದ್ದರು.

ಈಕೆಯ ಹೆಸರು ಟೈಡ್ ಓರ್ಟಿಜ್. ಓಕ್ಸಾಕಾದ ತೋಟದ ಒಡತಿ ಮತ್ತು ಕಲಾವಿದೆ. ಈ ಉತ್ಸವ ಮಹತ್ವದ ಬಗ್ಗೆ ಹೀಗೆ ವಿವರಿಸುತ್ತಾಳೆ.  ಹೌದು. ಇದು ಒಂದು ಮಾರುಕಟ್ಟೆ. ಇಲ್ಲಿ ಟ್ರಿನಿಡಾಡ್‍ನ ತರಕಾರಿಗಳು ಚೀನಾದ ನೋರಿಯಾದ ಹಣ್ಣುಗಳನ್ನು ಸಹ ಮಾರಾಟ ಮಾಡುತ್ತೇವೆ. ಅಲ್ಲದೇ ಇಲ್ಲಿ ತರಕಾರಿಗಳ ಜೊತೆಗೆ ಮೀನು ಮತ್ತು ಎಲ್ಲ ರೀತಿಯ ಸಮುದ್ರ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ. 100 ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಮೂಲಂಗಿ ಉತ್ಸವವನ್ನು ನಡೆಸಲಾಗುತ್ತಿದೆ ಎನ್ನುತ್ತಾಳೆ ಟೈಡ್.

ಚಿತ್ರಗಳು ಗಾತ್ರದಲ್ಲಿ ವಿಭಿನ್ನವಾಗಿದ್ದರೂ ಅವೆಲ್ಲವನ್ನೂ ಮೂಲಂಗಿಗಳು ಮತ್ತು ಮರದ ಕಡ್ಡಿಗಳಿಂದ ಮಾತ್ರ ಮಾಡಲಾಗಿದೆ. ತಮ್ಮ ಕಲಾಕೃತಿಗಳಿಗೆ ಬಣ್ಣ ಬಳಿಯಲು ಅಥವಾ ಇತರೆ ಯಾವುದೇ ವಸ್ತುವನ್ನು ಬಳಸಲು ಕಲಾವಿದರಿಗೆ ಅವಕಾಶ ನೀಡಿಲ್ಲ.   ಸ್ಪೈನ್ ದೇಶದವರು 16ನೇ ಶತಮಾನದಲ್ಲಿ ಮೆಕ್ಸಿಕೋಗೆ ಮೊದಲು ಮೂಲಂಗಿಗಳನ್ನು ತಂದರು. ಮೂಲಂಗಿ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಅದನ್ನು ಹೇರಳವಾಗಿ ಬೆಳೆದು ವಿಭಿನ್ನ ವಿನ್ಯಾಸಗಳಲ್ಲಿ ಅವುಗಳನ್ನು ಕೆತ್ತನೆ ಮಾಡುವಂತೆ ಸ್ಥಳೀಯ ಕೃಷಿಕರು ಮತ್ತು ಕಲಾವಿದರಿಗೆ ಸ್ಪೈನ್‍ನ ಇಬ್ಬರು ಕಲಾವಿದರು ನೀಡಿದ ಪ್ರೋತ್ಸಾಹದ ಫಲವೇ ಈ ಮೂಲಂಗಿ ಉತ್ಸವ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin