ಮೆಕ್ಸಿಕೋ ಗಡಿ ಗೋಡೆ ವಿವಾದ : ಪ್ಲೇಟು ಬದಲಿಸಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump

ವಾಷಿಂಗ್ಟನ್, ಸೆ.1- ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ವಿವಾದದ ಕೇಂದ್ರ ಬಿಂದುವಾಗಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತೆ ತಕರಾರುವೊಂದರಲ್ಲಿ ಪೇಚಿಗೆ ಸಿಲುಕಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ.  ಅಮೆರಿಕ ಮತ್ತು ಮೆಕ್ಸಿಕೋ ಗಡಿಯಲ್ಲಿ ಗೋಡೆಯೊಂದುನಿರ್ಮಾಣವಾಗಲಿದೆ. ಇದಕ್ಕೆ ಮೆಕ್ಸಿಕೋ ಹಣ ಪಾವತಿಸಬೇಕು ಎಂದು ಟ್ರಂಪ್ ಹೇಳಿದ್ದರು. ಈ ಬಗ್ಗೆ ವ್ಯಾಪಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಅವರು ನಾನು ಹಾಗೆ ಹೇಳಿಯೇ ಇಲ್ಲ ಎಂದು ಪ್ಲೇಟು ಬದಲಿಸಿದ್ದಾರೆ. ಮೆಕ್ಸಿಕೋ ಅಧ್ಯಕ್ಷರ ಜೊತೆ ಗೋಡೆ ನಿರ್ಮಿಸುವ ವಿಚಾರದ ಬಗ್ಗೆಯಷ್ಟೇ ನಾನು ಚರ್ಚಿಸಿದೆ. ಅದಕ್ಕೆ ಮೆಕ್ಸಿಕೋ ಸರ್ಕಾರವೇ ಹಣ ನೀಡಬೇಕು ಎಂಬ ವಿಷಯವನ್ನು ನಾನು ಈ ಮಾತುಕತೆ ವೇಳೆ ಪ್ರಸ್ತಾಪಿಸಿಯೇ ಇಲ್ಲ. ಅದು ಮುಂದಿನ ದಿನಗಳ ವಿಷಯ. ಇದು ಪೂರ್ವಭಾವಿ ಸಭೆಯಷ್ಟೇ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಟ್ರಂಪ್, ಅಮೆರಿಕಕ್ಕೆ ವಲಸೆ ಬರುತ್ತಿರುವ ಮೆಕ್ಸಿಕನ್ನರು ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಎಂದು ಟೀಕಿಸಿ ಆ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin