ಮೆಗಾ ವಿಶ್ವದಾಖಲೆಗೆ ಇಸ್ರೋ ಸಜ್ಜು, ಫೆ.15ರಂದು ಒಂದೇ ಬಾರಿಗೆ 104 ಉಪಗ್ರಹ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Isro--01

ಬೆಂಗಳೂರು, ಫೆ.12- ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇದೀಗ ಮೆಗಾ ವಿಶ್ವದಾಖಲೆಗೆ ಸಜ್ಜಾಗಿದೆ.   ಇಸ್ರೋ ಶೀಘ್ರವೇ ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹವನ್ನು ತಲುಪಲು ಹಾಗೂ ಕೆಂಪುಗ್ರಹವಾದ ಮಂಗಳನ ಅಂಗಳಕ್ಕೆ ಮರುಪ್ರವೇಶಿಸಲು ಸಿದ್ಧತೆ ನಡೆಸಿದೆ. ಈ ಎರಡೂ ಗ್ರಹಗಳ ಮೇಲೆ ನೂತನ ಅನ್ವೇಷಣೆ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಭೂಮಿಗೆ ತೀರಾ ಹತ್ತಿರದಲ್ಲಿರುವ ಶುಕ್ರ ಮತ್ತು ಮಂಗಳನ ಅಂಗಳಕ್ಕೆ ಗಗನನೌಕೆಗಳನ್ನು ರವಾನಿಸಿ ಆ ಮೂಲಕ ಹೆಚ್ಚಿನ ಸಂಶೋಧನೆ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿದೆ.

ಹೊಸ ನಮೂನೆ ವಿದ್ಯುನ್ಮಾನ ಸಂಶೋಧನಾ ದಾಖಲೆ ಪತ್ರಗಳ ನೂರಾರು ಪುಟಗಳಲ್ಲಿ ಈ ಗ್ರಹಗಳ ಬಗ್ಗೆ ಅಡಕವಾಗಿರುವ ಮಹತ್ವದ ಮಾಹಿತಿಗಳನ್ನು ಪ್ರಾಯೋಗಿಕವಾಗಿ ಬಹಿರಂಗಗೊಳಿಸುವ ನಿಟ್ಟಿನಲ್ಲಿ ಇದು ಪ್ರಪ್ರಥಮ ಅನ್ವೇಷಣೆಯಾಗಿದೆ.   ಈ ಎರಡು ಗ್ರಹಗಳ ಅನ್ವೇಷಣೆಯನ್ನು ಏಕಕಾಲದಲ್ಲೇ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಇದಕ್ಕಾಗಿ ಸೌರಮಂಡಲದಲ್ಲಿ ಸುಸಜ್ಜಿತ 104 ಉಪಗ್ರಹಗಳನ್ನು ಇಳಿಸಲು ತಯಾರಿ ನಡೆದಿದೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಇಷ್ಟು ಸಂಖ್ಯೆ ಉಪಗ್ರಹಗಳನ್ನು ವ್ಯೂಮ ವಲಯಕ್ಕೆ ರವಾನಿಸುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ ಸೇರಿದಂತೆ ಯಾವೊಂದು ದೇಶವು ಈತನಕ ಇಂಥ ಮಹಾ ಅನ್ವೇಷಣೆಗೆ ಕೈ ಹಾಕಿಲ್ಲ. ಅಲ್ಲದೇ ಒಂದೇ ಬಾರಿಗೆ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಹಾರಿಸಿಲ್ಲ. ಹಾಗಾಗಿ ಇದು ಮೆಗಾ ವಿಶ್ವ ದಾಖಲೆಯಾಗಲಿದೆ.

2014ರಲ್ಲಿ ರಷ್ಯಾ 37 ಉಪಗ್ರಹಗಳನ್ನು ಮಾರ್ಪಡಿತ ಅಂತರ-ಖಂಡ ಖಡಾಂತರ ಕ್ಷಿಪಣ ಬಳಸಿ ಒಂದೇ ಉಡ್ಡಯನದಲ್ಲಿ ಬಾಹ್ಯಾಕಾಶಕ್ಕೆ ರವಾನಿಸಿತ್ತು. ಇದು ಪ್ರಸ್ತುತ ಇರುವ ವಿಶ್ವದಾಖಲೆ.
ಎಲ್ಲವೂ ಯೋಜನೆ ಪ್ರಕಾರವಾಗಿ ನಡೆದರೆ, ಫೆ.15ರಂದು ಬುಧವಾರ ಇಸ್ರೋ ತನ್ನ ಪಿಎಸ್‍ಎಲ್‍ವಿ ಮೂಲಕ 101 ಪುಟ್ಟ ವಿದೇಶಿ ಉಪಗ್ರಹಗಳು ಮತ್ತು ಮೂರು ಭಾರತೀಯ ಉಪಗ್ರಹಗಳನ್ನು ನಭೈೂೀಮಂಡಲಕ್ಕೆ ಚಿಮ್ಮಿಸಲಿದೆ. ಆ ಮೂಲಕ ವಿಶ್ವ ಖಗೋಳ ಕ್ಷೇತ್ರದಲ್ಲಿ ವಿನೂತನ ದಾಖಲೆಯೊಂದಿಗೆ ಹೊಸ ಮನ್ವಂತರದ ಆಧ್ಯಾಯ ಆರಂಭವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin