ಮೆಚ್ಚಿನ ಮಡದಿಯ ಶವ ಹೊತ್ತು 10ಕಿಮೀ ನಡೆದ..!

ಈ ಸುದ್ದಿಯನ್ನು ಶೇರ್ ಮಾಡಿ

Wife-01

ಭುವನೇಶ್ವರ್, ಆ.25- ತನ್ನ ಮೃತ ಪತ್ನಿಯ ಪಾರ್ತಿವ ಶರೀರವನ್ನು ಮನೆಗೆ ಸಾಗಿಸಲು ವಾಹನವೊಂದನ್ನು ಪಡೆಯುವಲ್ಲಿ ವಿಫಲನಾದ ಬುಡಕಟ್ಟು ಕೋಮಿನ ವ್ಯಕ್ತಿಯೊಬ್ಬ ತನ್ನ ಹೆಗಲ ಮೇಲೆ ಆಕೆಯ ಶವವನ್ನು ಹೊತ್ತು 10ಕಿಮೀ ದೂರ ನಡೆದ ಮನ ಕಲಕುವ ಘಟನೆ ಒಡಿಶಾದ ಹಿಂದುಳಿದ ಜಿಲ್ಲೆ ಕಲಹಂಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ದಾನ ಮಜ್ಹಿ ಎಂಬಾತನ ಪತ್ನಿ ಅಮಂಗ್ ದೇಸಾಯ್ ನಿನ್ನೆ ರಾತ್ರಿ ಕ್ಷಯ ರೋಗದಿಂದ ಭವಾನಿ ಪಟ್ನ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಆದರೆ, ಈಕೆಯ ಶವವನ್ನು ಮನೆಗೆ ಕೊಂಡೊಯ್ದು ಅಲ್ಲಿಂದ ಸ್ಮಶಾನಕ್ಕೆ ಸಾಗಿಸಲು ಈತ ಎಷ್ಟೇ ಕಾಡಿ ಬೇಡಿದರೂ ಒಂದೇ ಒಂದು ವಾಹನ ಸಿಗಲಿಲ್ಲ. ಇದರಿಂದ ನೊಂದ ಈತ ತನ್ನ ಹೆಗಲ ಮೇಲೆಯೇ ಮೆಚ್ಚಿನ ಮಡದಿಯ ಶವವನ್ನು ಹೊತ್ತುಕೊಂಡು ಮಗಳೊಂದಿಗೆ 10ಕಿಮೀ ದೂರದಲ್ಲಿರುವ ತನ್ನ ಮನೆಯತ್ತ ನಡೆದ. ದೃಶ್ಯ ನೋಡಿ ಸ್ಥಳೀಯರು ಮಮ್ಮಲ ಮರುಗಿದರು.

ಸರ್ಕಾರಿ ಆಸ್ಪತ್ರೆಗಳಿಂದ ಮೃತರ ಮನೆಗಳಿಗೆ ಅಥವಾ ರುದ್ರಭೂಮಿಗೆ ಶವವನ್ನು ಉಚಿತವಾಗಿ ಸಾಗಿಸಲು ಅನುಕೂಲವಾಗುವಂತೆ ಕಳೆದ ವಾರವಷ್ಟೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರ ಮಹಾ ಪರಾಯಣ ಎಂಬ ಯೋಜನೆಗೆ ಚಾಲನೆ ನೀಡಿತ್ತು. ಆದರೆ, ಈ ಸೌಲಭ್ಯ ಈತನಿಗೆ ಗಗನ ಕುಸುಮವಾಯಿತು.  ನಾನು ತುಂಬಾ ಬಡವ. ಖಾಸಗಿ ವಾಹನದಲ್ಲಿ ಶವ ಕೊಂಡೊಯ್ಯಲು ನನ್ನ ಬಳಿ ಹಣವಿಲ್ಲ. ಎಷ್ಟೇ ಬೇಡಿಕೊಂಡರೂ ಯಾರೊಬ್ಬರೂ ನನೆ ಸಹಾಯ ಮಾಡಲಿಲ್ಲ ಎಂದು ಆತ ನೊಂದು ನುಡಿದಿದ್ದಾನೆ.  ಇದು ನಮ್ಮ ಭಾರತದ ವಾಸ್ತವ ಸ್ಥಿತಿಯಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin