ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ
ಮೆಟ್ರೋದಲ್ಲಿ ಪ್ರಯಾಣಿಸುವ ವಿಕಲಚೇತನರಿಗೆ ವ್ಹೀಲ್ ಚೇರ್  ಸೌಲಭ್ಯಕ್ಕೆ ಜಾರ್ಜ್ ಚಾಲನೆ ನೀಡಿದರು. ಬಿಎಂಆರ್‍ಸಿಎಲ್  ಎಂಡಿ ಎಂ. ಪ್ರದೀಪ್‍ಸಿಂಗ್ ಕರೋಲ ಜತೆಗಿದ್ದರು.
ಮೆಟ್ರೋದಲ್ಲಿ ಪ್ರಯಾಣಿಸುವ ವಿಕಲಚೇತನರಿಗೆ ವ್ಹೀಲ್ ಚೇರ್ ಸೌಲಭ್ಯಕ್ಕೆ ಜಾರ್ಜ್ ಚಾಲನೆ ನೀಡಿದರು. ಬಿಎಂಆರ್‍ಸಿಎಲ್ ಎಂಡಿ ಎಂ. ಪ್ರದೀಪ್‍ಸಿಂಗ್ ಕರೋಲ ಜತೆಗಿದ್ದರು.

ಬೆಂಗಳೂರು, ನ.4-ಬೈಯ್ಯಪ್ಪನಹಳ್ಳಿ-ಪೀಣ್ಯ ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. ನಮ್ಮ ಮೆಟ್ರೋ ನಿಗಮದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ ಬಿಡುಗಡೆ ಹಾಗೂ ಮೆಟ್ರೋ ಕಾಮಗಾರಿ ಪ್ರಗತಿ ಪರಿಶೀಲನೆ ಪ್ರಯಾಣಿಕರ ಅನುಕೂಲಕ್ಕಾಗಿ ವ್ಹೀಲ್‍ಛೇರ್ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮೆಟ್ರೋ ರೈಲು ಡಿಪೋಗಳಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಕೇಂದ್ರ ಕೂಡ ನೆರವು ನೀಡಲಿದೆ.

ಇದೇ ಡಿಸೆಂಬರ್ ವೇಳೆಗೆ ಮೆಜೆಸ್ಟಿಕ್ ಸುರಂಗ ಮಾರ್ಗದ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ ಎಂದು ಹೇಳಿದರು. ಮುಂದಿನ ಏಪ್ರಿಲ್ ವೇಳೆಗೆ ಮೆಟ್ರೋ -1ನೇ ಹಂತ ಪೂರ್ಣಗೊಳ್ಳಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಹೇಳಿದ್ದೇವೆ. ಬೆಂಗಳೂರು ಕೇಂದ್ರ ಸ್ಥಳದ ಮೆಟ್ರೋದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ 1300 ಸಲಹೆಗಳು ಬಂದಿವೆ. 9 ಮಾರ್ಗಗಳ ಪೈಕಿ ರಾಜ್ಯಸರ್ಕಾರ ಒಂದು ಮಾರ್ಗವನ್ನು ಅಂತಿಮಗೊಳಿಸಿದೆ ಎಂದು ತಿಳಿಸಿದರು.

ನವೆಂಬರ್ 17, 18ರ ವೇಳೆಗೆ ಜಯನಗರ ಕಡೆಗೆ ಒಂದು ಹಳಿಯಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಮತ್ತೊಂದು ಹಳಿ ಹಾಕುವ ಕೆಲಸ ಆರಂಭವಾಗಲಿದೆ. ಫೇಸ್-2 ಮೆಟ್ರೋ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆಆರ್‍ಪುರಂ ವರೆಗೆ ಮಾರ್ಗ ನಿರ್ಮಾಣಕ್ಕೆ ತಾವು ಒಪ್ಪಿಗೆ ಸೂಚಿಸಿ ಕಡತವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದ್ದು, ಕ್ಯಾಬಿನೆಟ್ ಒಪ್ಪಿಗೆ ನೀಡಲಿದೆ ಎಂದು ಅವರು ಹೇಳಿದರು.  ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಕರೋಲಾ ಮಾತನಾಡಿ, ಮುಂದಿನ ಸೋಮವಾರದಿಂದ ಮೆಟ್ರೋ ರೈಲು ದಟ್ಟಣೆ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದರಂತೆ ರೈಲು ಸಂಚರಿಸಲಿವೆ.

ಜನವರಿ ವೇಳೆಗೆ ಪ್ರತಿ ಮೂರು ನಿಮಿಷಕ್ಕೆ ರೈಲು ಸಂಚರಿಸಲಿದೆ. ಮೆಟ್ರೋ ಫೇಸ್-2 ಮುಗಿಯುವ ವೇಳೆಗೆ 50 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.  ಬೆಂಗಳೂರು ನಮ್ಮ ಮೆಟ್ರೋ ಭೂ ಮೇಲ್ಮಟ್ಟದಿಂದ 70 ಅಡಿ ಆಳದಲ್ಲಿನ ಸುರಂಗ ಮಾರ್ಗದಲ್ಲಿ ಇಂದು ಸಚಿವರು ಪರಿಶೀಲನೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin