ಮೆಟ್ರೋ ರೀಚ್-1 ಸುರಂಗ ಕೊರೆಯುವ  ಕಾರ್ಯ ಪೂರ್ಣ

ಈ ಸುದ್ದಿಯನ್ನು ಶೇರ್ ಮಾಡಿ

Metro

ಬೆಂಗಳೂರು, ಸೆ.23- ಮಂತ್ರಿ ಮಾಲ್‍ನಿಂದ ಮೆಜೆಸ್ಟಿಕ್‍ವರೆಗೆ ಮೆಟ್ರೋದ ಸುರಂಗ ಮಾರ್ಗ ಕೊರೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಿಂದ 1,800 ಮೀಟರ್ ಸುರಂಗ ಕೊರೆಯುವ ಕಾರ್ಯ ಹಲವು ಅಡೆತಡೆಗಳ ನಡುವೆಯೇ ನಡೆದು ಕೊನೆಗೂ ಇಂದು ಕೃಷ್ಣ ಟನಲ್ ಬೋರಿಂಗ್ ಮಿಷನ್ ಮೆಜೆಸ್ಟಿಕ್ ಬಳಿ ಹೊರ ಬಂದಿದೆ. ನ್ಯಾಷನಲ್ ಕಾಲೇಜಿನಿಂದ ಆರಂಭಗೊಂಡಿದ್ದ ಸುರಂಗ ಕೊರೆಯುವ ಕೆಲಸ ಮೂರು ವರ್ಷ ಹಿಡಿದಿತ್ತು. ಚಿಕ್ಕಪೇಟೆಯಿಂದ ಮೆಜೆಸ್ಟಿಕ್‍ಗೂ 9 ತಿಂಗಳು ಹಿಡಿದಿತ್ತು. ಈಗ ಒಂದು ಹಂತಕ್ಕೆ ಪೂರ್ಣಗೊಳ್ಳುವ ಒಂದು ಹಂತಕ್ಕೆ ಬಂದಿದ್ದು, ಸುರಂಗ ಕೊರೆದಿರುವ ಪ್ರಕ್ರಿಯೆ ಪೂರ್ಣಗೊಳಿಸುವ ಜಾಗದಲ್ಲಿ ಹಳಿ ಜೋಡಣೆ ಕಾರ್ಯ ಆರಂಭಿಸಲಾಗುವುದು.

ಇದರಿಂದಾಗಿ ಉತ್ತರ ದಕ್ಷಿಣ ಕಾರಿಡಾರ್ ರೀಚ್-1ನ ಸುರಂಗ ಕೊರೆಯುವ ಕಾಮಗಾರಿ ಮುಕ್ತಾಯವಾಗಿದೆ ಎಂದು ನಿಗಮದ ಅಧ್ಯಕ್ಷ ಪ್ರದೀಪ್ ಸಿಂಗ್ ಕರೋಲಾ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin