ಮೆಡಿಟರೇನಿಯನ್ ಸಾಗರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದ 1,000 ವಲಸಿಗರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Resue

ರೋಮ್, ಜ.29- ಮೆಡಿಟರೇನಿಯನ್ ಸಾಗರದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಅಕ್ರಮ ವಲಸಿಗರ ಪಲಾಯನ ಮುಂದುವರಿದಿದ್ದು, ಸಮುದ್ರದ ಮಧ್ಯಭಾಗದಲ್ಲಿ ಸೋರುತ್ತಿರುವ ದೋಣಿಗಳಿಂದ 1,000ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ.  ಸುರಕ್ಷಿತವಲ್ಲದ ಆರು ರಬ್ಬರ್ ದೋಣಿಗಳು ಮತ್ತು ಮೂರು ಮರದ ದೋಣಿಗಳಲ್ಲಿ ಈ ವಲಸಿಗರು ಪ್ರಯಾಣಿಸುತ್ತಿದ್ದರು. ಬಹುತೇಕ ನೌಕೆಗಳು ಸೋರಿಕೆಯಾಗಿ ಮುಳುಗಡೆಯಾಗುವ ಆತಂಕವಿತ್ತು ಎಂದು ಇಟಲಿಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

Resue-1

ಸ್ಪೇನ್‍ನ ಮಾನವೀಯ ನೆರವು ಸಂಸ್ಥೆ-ಪ್ರೋ ಆಕ್ಟಿವ್ ಒಪನ್ ಆಮ್ರ್ಸ್, ಕೆರಿಬಿಯಾದ ಸರಕು ಸಾಗಣೆ ಹಡುಗು ಮತ್ತು ಇಟಲಿ ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದವು. ಒಂದು ರಬ್ಬರ್ ದೋಣಿಯಲ್ಲಿದ್ದ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ.  ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ 1.81 ಲಕ್ಷ ಆಫ್ರಿಕಾ ವಲಸಿಗರು ದೋಣಿಗಳ ಮೂಲಕ ಇಟಲಿ ತಲುಪಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin