ಮೆಸ್ಕಾಂ ವಿವಿಧ ಕಾಮಗಾರಿಗಳಿಗೆ 27 ಕೋಟಿ ರೂ. : ಶಾಸಕ ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

datta

ಕಡೂರು, ಅ.17- ಕಡೂರು ವಿಧನಸಭಾ ಕೇತ್ರದಲ್ಲಿ ಶಾಶ್ವತವಾಗಿ ವಿದ್ಯುತ್ ಸಮಸ್ಯೆ ಪರಿಹರಿಸಲು ಸರ್ಕಾರದಿಂದ ಈಗಾಗಲೆ ಬಿಡುಗಡೆಯಾಗಿದ್ದ 27 ಕೋಟಿ ರೂ. ಅನುದಾನದಲ್ಲಿ ಹಲವಾರು ಕಾಮಗಾರಿಗಳು ಮುಕ್ತಾಯವಾಗಿದ್ದು, ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು. ಪಟ್ಟಣ ಸಮೀಪದ ಕಡೂರು ಉಪ ವಿಭಾಗದ ಗ್ರಾಮಾಂತರ ಶಾಖೆಯ ವ್ಯಾಪ್ತಿಯ ಆಲಘಟ್ಟ ಮತ್ತು ಮತಿಘಟ್ಟ ಶಾಖೆಯ ಕುಪ್ಪಾಳು ಮತ್ತು ಸುತ್ತ-ಮುತ್ತಲ ಗ್ರಾಮಗಳಿಗೆ ಉತ್ತಮ ವಿದ್ಯುತ್ ಸರಬರಾಜು ಮಾಡಲು ತಂಗಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ರಚನೆಗೊಂಡ 11 ಕೆ.ವಿ. ಮಾರ್ಗಗಳ ಚೇತನಗೊಳಿಸುವ ಸುಮಾರು 1.55 ಕೋಟಿ ರೂ. ಕಾಮಗಾರಿ ಉದ್ಟಾಟಿಸಿ ಮಾತನಾಡಿದರು.

ತಂಗಲಿ, ಆಲಘಟ್ಟ ಮಾರ್ಗದ ದುರಸ್ಥಿಗೆ ರೂ. 45 ಲಕ್ಷ, ಯಗಟಿ, ಮರವಂಜಿ, ವನಭೋಗಿಹಳ್ಳಿ ಮಾರ್ಗಕ್ಕೆ ರೂ. 35 ಲಕ್ಷ, ಸಿಂಗಟಗೆರೆ, ಕೆ. ಬಿದರೆ ಮಾರ್ಗಕ್ಕೆ ರೂ. 25 ಲಕ್ಷ, ಮತಿಘಟ್ಟ, ಸೋಮನಹಳ್ಳಿ ಮಾರ್ಗಕ್ಕೆ ರೂ. 20 ಲಕ್ಷ, ವಿ. ಯರದಕೆರೆ ಮಾರ್ಗಕ್ಕೆ ರೂ. 13 ಲಕ್ಷ, ಬುಕ್ಕಸಾಗರ, ಎಮ್ಮೆದೊಡ್ಡ ಮಾರ್ಗಕ್ಕೆ ರೂ. 45 ಲಕ್ಷ, ಎಂ. ಕೋಡಿಹಳ್ಳಿ, ಜಿ. ಯರ್ಕೆರೆ ಮಾರ್ಗಕ್ಕೆ ರೂ. 25 ಲಕ್ಷ, ಮಲ್ಲಿದೇವಿಹಳ್ಳಿ, ಕಲ್ಲಾಪುರ ಮಾರ್ಗಕ್ಕೆ ರೂ. 48 ಲಕ್ಷ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ಬ್ಯಾಗಡೇಹಳ್ಳಿ ವಿತರಣಾ ಕೇಂದ್ರದಿಂದ ಎಮ್ಮೆದೊಡ್ಡಿ ಬಾಗಕ್ಕೆ 11 ಕೆವಿಎ ಉಪ ವಿಭಾಗಕ್ಕೆ ರೂ. 1.18 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಹಿಂದೆ ಟಿ.ಸಿಗಳ ದುರಸ್ಥಿಗಾಗಿ ಭದ್ರಾವತಿಗೆ ತೆರಳಬೇಕಿತ್ತು, ಈಗ ಇದಕ್ಕಾಗಿ ಬೇರೆಕಡೆ ಹೋಗದೆ, ನಮ್ಮಲ್ಲಿಯೇ ದುರಸ್ತಿ ಕೇಂದ್ರ ಪ್ರಾರಂಭವಾಗಿದೆ, ಸೋಲಾರ್ ಎನರ್ಜಿ ಯುನಿಟ್ ರೂ. 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಇದಕ್ಕಾಗಿ 100 ಎಕರೆ ಜಮೀನು ಬೇಕಿದೆ ಎಂದು ತಿಳಿಸಿದರು.ಜಿಪಂ ಸದಸ್ಯರಾದ ಶರತ್, ಲಕ್ಕಮ್ಮಸಿದ್ದಪ್ಪ, ತಾಪಂಸದಸ್ಯ ತಿಮ್ಮಯ್ಯ, ಮೆಸ್ಕಾಂ ನಿರ್ದೇಶಕ ವಿ. ಜಯರಾಂ, ಕೆ.ಎಸ್. ಆನಂದ್, ಮತಿಘಟ್ಟ ಗ್ರಾ.ಪಂ. ಅಧ್ಯಕ್ಷೆ ಶೀಲಮ್ಮ, ತಂಗಲಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಬೀರೂರು ಪುರಸಭಾ ಸದಸ್ಯ ಲೋಕೇಶಪ್ಪ, ಅಧಿಕಾರಿ ರೋಮರಾಜು, ಚಿದಾನಂದ್, ಗುತ್ತಿಗೆದಾರ ಭೋಜರಾಜು ಮುಂತಾದವರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin