ಮೆಹಂಜೊ ದಾರೊ V/s ರುಸ್ತುಂ

ಈ ಸುದ್ದಿಯನ್ನು ಶೇರ್ ಮಾಡಿ

Rustum

ಬಾಲಿವುಡ್ ನಲ್ಲಿ ಇದೇ ಆಗಸ್ಟ್ 12 ರಂದು 2 ಬಹು ನಿರೀಕ್ಷೆಯ ಚಿತ್ರಗಳು ಬಿಡುಗಡೆ ಆಗುತ್ತಿವೆ. ಸ್ಟಾರ್ ನಟರಾದ  ಅಕ್ಷಯ್ ಕುಮಾರ್ ನಟಿಸಿರುವ ರಿಯಾಲಿಸ್ಟಿಕ್ ಕತೆ ಹೊಂದಿರುವ ‘ರುಸ್ತುಂ’ ಹಾಗೂ  ಅದ್ದೊರಿ ಮೇಕಿಂಗ್ ನಿಂದಲೇ ಸದ್ದು  ಮಾಡಿದ ಮೆಹಂಜೊ ದಾರೊ ಈ  ವಾರ ತೆರೆಯಮೇಲೆ ಸ್ಪರ್ಧೆಗಿಳಿಯಲಿವೆ.    ‘ರುಸ್ತುಂ’ ಶುಕ್ರವಾರ ತೆರೆ ಕಾಣಲಿದ್ದು, ಇದೇ ದಿನ ಅಶುತೋಷ್ ಗೋವಾರಿಕರ್ ನಿರ್ದೇಶನದ ಹೃತಿಕ್ ರೋಷನ್ ನಟಿಸಿರುವ ‘ಮೆಹಂಜೊ ದಾರೊ’ ಕೂಡ ಬಿಡುಗಡೆಯಾಗುತ್ತಿದೆ. ಇತಿಹಾಸದ ಕಥಾ ಹಂದರ ಹೊಂದಿರುವ ‘ಮೆಹಂಜೊ ದಾರೊ’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಕನ್ನಡತಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ‘ಮೆಹಂಜೊ ದಾರೊ’ ಬಿಡುಗಡೆಗೂ ಮೊದಲೇ ಗಳಿಕೆಯಲ್ಲಿ ದಾಖಲೆ ಬರೆದಿದೆ. ಈ ಚಿತ್ರದ ಸ್ಯಾಟ್ ಲೈಟ್ ಹಕ್ಕು ಬರೋಬ್ಬರಿ 45 ಕೋಟಿ ರೂ.ಗೆ ಮಾರಾಟವಾಗಿದೆ. ಭರ್ಜರಿ ಯಶಸ್ಸು ಕಂಡ ‘ಲಗಾನ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಅಶುತೋಶ್ ಗೋವಾರಿಕರ್ ‘ಮೆಹಂಜೊ ದಾರೊ’ ನಿರ್ದೇಶನ ಮಾಡಿದ್ದು, ಚಿತ್ರ ನಿರೀಕ್ಷೆ ಮೂಡಿಸಿದೆ.

Facebook Comments

Sri Raghav

Admin