‘ಮೇಕೆ ಮಾನವ’ನಿಗೆ ಐಜಿ ನೊಬೆಲ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Got-Mana

ಒಟ್ಟಾವೋ, ಸೆ.25- ಜಗತ್ತಿನಲ್ಲಿ ಮನುಷ್ಯ ಅತೀ ಬುದ್ಧಿವಂತ ಪ್ರಾಣಿ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ತಂತ್ರಜ್ಞಾನ ಬೆಳೆಸಿಕೊಂಡು ಐತಿಹಾಸಿಕ ಸಾಧನೆಗೈದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಾಣಿಗಳ ರೀತಿಯಲ್ಲಿ ಗುಣ-ನಡವಳಿಕೆಗಳನ್ನು ರೂಪಿಸಿಕೊಂಡು ಐಜಿ ನೊಬೆಲ್ ಪುರಸ್ಕಾರಕ್ಕೆ ಭಾಜನವಾಗಿದ್ದಾನೆ. ಸ್ವಿಟ್ಜರ್‍ಲ್ಯಾಂಡ್‍ನ ಥಾಮಸ್ ಎಂಬ ವ್ಯಕ್ತಿಯು ಮೇಕೆಗಳ ರೀತಿಯಲ್ಲಿ ಬದುಕುತ್ತಿದ್ದಾನೆ. ಈತ ಹೆಚ್ಚಿನ ಸಮಯವನ್ನು ಮೇಕೆಗಳ ಜತೆ ಕಳೆಯುತ್ತಿದ್ದಾನೆ, ಮೇಕೆಗಳಂತೆ ನಡೆದಾಡುತ್ತಾನೆ. ಅದರ ಜತೆಯೇ ಹುಲ್ಲು ತಿನ್ನುತ್ತಾನೆ. ಅವುಗಳಂತೆ ನಡೆದಾಡಲು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಅವುಗಳ ಜತೆ ಬೆಟ್ಟ-ಗುಡ್ಡಗಳಲ್ಲಿ ನಡೆದಾಡುತ್ತಾನೆ.

ಹೀಗಾಗಿ ಮೇಕೆಗಳು ಹಾಗೂ ಥಾಮಸ್ ನಡುವೆ ಅವಿನಾಭಾವ ಸಂಬಂಧವಿದ್ದು, ಅವುಗಳ ಜತೆ ರಾತ್ರಿ ಕಳೆಯುತ್ತಾನೆ. ಈತನ ವರ್ತನೆ ಕಂಡು ಇಡೀ ವಿಶ್ವವೇ ಬೆರಗಾಗಿದೆ. ಥಾಮಸ್ ನಡವಳಿಕೆ ಗಮನಿಸಿದ ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಈತನಿಗೆ ಐಜಿ ನೊಬೆಲ್ ಪುರಸ್ಕಾರ ನೀಡಿದೆ.

1439306501827984

full_ThomasThwaites2b-PhotoCredit-Daniel_Alexander

Goat14-Thomas_Thwaites-photo-Tim_Bowditch

Goat-Project_24-x630

Facebook Comments

Sri Raghav

Admin