ನಟಿ ಮೇಘನಾ ರಾಜ್ ಈಗ ಗಾಯಕಿ

ಈ ಸುದ್ದಿಯನ್ನು ಶೇರ್ ಮಾಡಿ

meghana

ಕನ್ನಡದಲ್ಲಿ ಹೀರೋಗಳೇ ಗಾಯಕರಾದ ಹಾಡುಗಳು ಬಹುತೇಕ ಹಿಟ್ ಆಗಿವೆ. ಇದೀಗ ನಾಯಕಿಯರೂ ಗಾಯಕಿಯರಾಗುವ ಟ್ರೆಂಡ್ ಒಂದು ಹುಟ್ಟಿಕೊಂಡಿದೆ.ಈ ಹಿಂದೆ ರಾಧಿಕಾ ಪಂಡಿತ್ ಕೂಡಾ ಒಂದು ಹಾಡಿಗೆ ಧ್ವನಿ ನೀಡಿ ಸುದ್ದಿಯಾಗಿದ್ದರು. ಇದೀಗ ಮೇಘನಾ ರಾಜ್ ಸರದಿ..!ಮುಸ್ಸಂಜೆ ಮಹೇಶ್ ನಿರ್ದೇಶನದ ಜಿಂದಾ ಚಿತ್ರಕ್ಕೆ ನಾಯಕಿಯಾಗಿರುವ ಮೇಘನಾ ರಾಜ್ ಅದೇ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಗಾಯಕಿಯಾಗಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದ ಮಾದೇಶ್ವರನ ಮೇಲಾಣೆ ಮುದ್ದು ನೀನು ಎಂಬ ಹಾಡನ್ನು ಮೇಘನಾ ಹಾಡಿದ್ದಾರೆ.ಜಿಂದಾ ಒಂದು ಗ್ಯಾಂಗಿನ ಸುತ್ತಾ ನಡೆಯುವ ಕಥೆ ಹೊಂದಿದೆ. ದತ್ತ ಫಿಲಿಂ ಲಾಂಛನದಲ್ಲಿ ದತತಾತ್ರೇಯ ಬಚ್ಚೇಗೌಡ ಹಾಗೂ ಭಾನು ದತ್ತ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಯುವರಾಜ್, ಮೇಘನಾರಾಜ್, ದೇವರಾಜ್, ಕೃಷ್ಣ, ಲೋಕಿ, ಅರುಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin