‘ಮೇಟಿ’ ಸೀಟ್’ಗೆ ಮುಗಿಬಿದ್ದ ಸಚಿವಾಕಾಕ್ಷಿಗಳು.! ರೇಸ್‍ನಲ್ಲಿ ರೇವಣ್ಣ, ನಾಗರಾಜ್, ಕಾಶಂಪೂರ್

ಈ ಸುದ್ದಿಯನ್ನು ಶೇರ್ ಮಾಡಿ

Meti-Seat-01

ಬೆಂಗಳೂರು, ಡಿ.15- ಎಚ್.ವೈ.ಮೇಟಿಯವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಈಗಾಗಲೇ ಲಾಬಿ ಶುರುವಾಗಿದೆ. ಹಿರಿಯ ಕಾಂಗ್ರೆಸ್ ಶಾಸಕರು ಈ ಸಚಿವ ಸ್ಥಾನದತ್ತ ಕಣ್ಣಿಟ್ಟು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾರಂಭಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದವರಿಗೆ ಈ ಸ್ಥಾನ ನೀಡಲಾಗಿತ್ತು. ಮತ್ತೊಬ್ಬರಿಗೆ ಮತ್ತೆ ಅದೇ ಜಾತಿಯವರಿಗೆ ಕೊಡಬೇಕೆಂದರೆ ಎಚ್.ಎಂ.ರೇವಣ್ಣ, ಎಂ.ಟಿ.ಬಿ.ನಾಗರಾಜ್, ವಿಜಯಾನಂದ ಕಾಶಂಪೂರ್, ಬಿ.ಬಿ.ಚಿಮ್ಮನಕಟ್ಟಿ ಅವರ ಹೆಸರುಗಳು ಕೇಳಿಬಂದಿವೆ.  ಎಂ.ಟಿ.ಬಿ.ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿರುವುದರಿಂದ ಈಗಾಗಲೇ ಈ ಜಿಲ್ಲೆಯ ಕೋಟಾ ಮುಗಿದಿದೆ. ಎಚ್.ಎಂ.ರೇವಣ್ಣ ಬೆಂಗಳೂರು ಸಿಟಿ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಬೆಂಗಳೂರಿಗೆ ಈಗಾಗಲೇ ಐದು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಬಿ.ಬಿ.ಚಿಮ್ಮನಕಟ್ಟಿಯವರಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರಿಗೆ ಈ ಸ್ಥಾನ ನೀಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಉತ್ತರ ಕರ್ನಾಟಕ ಮತ್ತು ಕುರುಬ ಜಾತಿಯನ್ನು ಹೊರತುಪಡಿಸಿ ಎಸ್.ಟಿ.ಸೋಮಶೇಖರ್, ಸಿ.ಎಸ್.ನಾಡಗೌಡ, ಮೋಟಮ್ಮ ಮುಂತಾದವರು ಕೂಡ ಸಚಿವ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.  ಒಟ್ಟಾರೆ ಹೈಕಮಾಂಡ್ ಯಾರಿಗೆ ಕೃಪೆ ತೋರುತ್ತದೆ, ಮುಖ್ಯಮಂತ್ರಿಗಳು ಯಾರ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ ಕಾದು ನೋಡಬೇಕು. ನಿನ್ನೆಯ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀವ್ರ ಬೇಸರಕ್ಕೊಳಗಾಗಿದ್ದಾರೆ. ಇಂದಿನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಂದಿನ ಆಗು-ಹೋಗುಗಳ ಬಗ್ಗೆ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Eesanje News App

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin