ಮೇಲುಕೋಟೆಯಲ್ಲಿ ರಾಜಮುಡಿ ಬ್ರಹ್ಮೋತ್ಸವಕ್ಕೆ ಅದ್ಧೂರಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

melukote

ಮೇಲುಕೋಟೆ, ನ.5- ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರುವುದರೊಂದಿಗೆ ತೊಟ್ಟಿಲುಮಡು ಜಾತ್ರಾ ಮಹೋತ್ಸವವೆಂದೇ ಪ್ರಖ್ಯಾತವಾದ ರಾಜಮುಡಿ ಬ್ರಹ್ಮೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆತಿದೆ.ಜಾತ್ರಾಮಹೋತ್ಸವದ ಪ್ರಮುಖ ದಿನವಾದ ನವೆಂಬರ್ 9ರ ಬುಧವಾರ ಅಪೇಕ್ಷಿತ ಸಂತಾನಭಾಗ್ಯಕರುಣಿಸುವ ತೊಟ್ಟಿಲುಮಡು ಜಾತ್ರೆಯೆಂದೇ ಹೆಸರಾಗಿರುವ ಅಷ್ಟತೀರ್ಥೋತ್ಸವ ನೆರವೇರಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ರಾಜಮುಡಿ ಕಿರೀಟ ಧರಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿದ ನಂತರ ಸ್ವಾಮಿಯ ಪಾದುಕೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಗಿರಿಶಿಖರಗಳ ಮಧ್ಯೆ ಇರುವ ಎಂಟು ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ವೇದಪಾರಾಯಣದೊಂದಿಗೆ ಅಭಿಷೇಕ ನೇರವೇರುತ್ತದೆ. ಕಣಿವೆಯ ಬಳಿ ಇರುವ ತೊಟ್ಟಿಲಮಡು ಸಮೀಪ ಕೊನೆಯ ಅಭಿಷೇಕ ನೆರವೇರಲಿದೆ. ಅಲ್ಲಿ ಜಾತ್ರೆ ನೆರೆಯಲಿದ್ದು ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.
ಸಂತಾನಫಲ :

ನವೆಂಬರ್ 9 ರಂದು ನಡೆಯುವ ತೊಟ್ಟಿಲಮಡು ಜಾತ್ರೆಯಂದು ಬಹುಕಾಲ ಮಕ್ಕಳಾಗದ ದಂಪತಿಗಳು, ಸತ್ಪುತ್ರ ಅಪೇಕ್ಷಿಸುವ ನವದಂಪತಿಗಳು, ವಿವಾಹಾಪೇಕ್ಷಿತರು ಹರಕೆಕಟ್ಟಿಕೊಂಡು ಉತ್ಸವದಲ್ಲಿ ಭಾಗವಹಿಸುವ ಪ್ರತೀತಿಯಿದ್ದು, ವೈದ್ಯರು ಕೈಚೆಲ್ಲಿದ ಎಷ್ಟೂ ಪ್ರಕರಣಗಳ ದಂಪತಿಗಳು ಸಂತಾನ ಭಾಗ್ಯಪಡೆಯುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಹರಕೆ ಕಟ್ಟಿಕೊಂಡು ಅಷ್ಠತೀರ್ಥೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ.

melukote-4
ರಾಜಮುಡಿ ಉತ್ಸವ :

ಜಾತ್ರಾ ಮಹೋತ್ಸವದ ನಿಮಿತ್ತ 8 ಮಂಗಳವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ಮೈಸೂರು ರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತರಾಜಮುಡಿ ಮತ್ತು ಗಂಡುಬೇರಂಡ ಪದಕ ಹಾಗೂ 16 ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ತಂದು ಸ್ವಾಮಿಗೆ ಧರಿಸಿ ಉತ್ಸವ ನೆರವೇರಿಸಲಾಗುತ್ತದೆ. ನವೆಂಬರ್ 14ರವರೆಗೆ ರಾಜಮುಡಿ ಬ್ರಹ್ಮೋತ್ಸವದ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin