ಮೇಲ್ಚಾವಣಿ ಕುಸಿದು ಪುರಸಭೆಯ ನೌಕರ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್.ಪೇಟೆ,ಆ.17- ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿನ ಪುರಸಭೆಗೆ ಸೇರಿದ ನೀರಿನ ಟ್ಯಾಂಕ್ ಆವರಣದಲ್ಲಿರುವ ವಸತಿ ಗೃಹ ಒಂದರ ಮೇಲ್ಚಾವಣಿ ಕುಸಿದು ಪುರಸಭೆಯ ನೌಕರರೊಬ್ಬರು ಗಂಭೀರ  ಗಾಯಗೊಂಡಿರುವ ಘಟನೆ ನಡೆದಿದೆ.ಪುರಸಭೆಯ ನೀರು ಸರಬರಾಜು ವಿಭಾಗದಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಕೆ.ಶಿವಲಿಂಗಯ್ಯ(50) ಗಾಯಗೊಂಡ ವ್ಯಕ್ತಿ.ಮನೆಯಲ್ಲಿ ಊಟ ಮಾಡುತ್ತಾ ಕುಳಿತಿದ್ದಾಗ ವಸತಿ ಗೃಹದ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೆಟ್ ಕುಸಿದು ಶಿವಲಿಂಗಯ್ಯ ಅವರ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಅವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಪತ್ನಿ ಶಾರದಮ್ಮ ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಚಿಕಿತ್ಸೆ ಪಡೆಯುತ್ತಿರುವ ಶಿವಲಿಂಗಯ್ಯ ಅವರನ್ನು ಭೇಟಿ ಮಾಡಿದ ಪುರಸಭೆಯ ಅಧ್ಯಕ್ಷ ಹೆಚ್.ಕೆ.ಅಶೋಕ್ ಮತ್ತು ಮುಖ್ಯಾಧಿಕಾರಿ ಯಶವಂv ಕುಮಾರ್ ಮತ್ತು ಸದಸ್ಯರು ಸಾಂತ್ವನ ಹೇಳಿದರು. ಶಿಥಿಲ ಕಟ್ಟಡ: ಸುಮಾರು 40ವರ್ಷಕ್ಕೂ ಹಳೆಯದಾದ ವಸತಿ ಗೃಹವನ್ನು ಆಗಾಗ್ಗೆ ರಿಪೇರಿ ನೆಪದಲ್ಲಿ ಸಾವಿರಾರು ರೂ ಹಣ ಗುಳುಂ ಮಾಡಲಾಗಿದೆ ಆದರೆ ಯಾವುದೆ ದುರಸ್ಥಿ ನಡೆಯದೆ ಆರ್‍ಸಿಸಿ ಕುಸಿದು ಬಿದ್ದು ಈ ಅನಾಹುತ ಉಂಟಾಗಿದೆ. ಶಿವಲಿಂಗಯ್ಯ ಅವರ ಕುಟುಂವ ಬೀದಿಗೆ ಬಿದ್ದಿದೆ. ತಕ್ಷಣ ಅವg ಕುಟುಂಬಕ್ಕೆ ಕನಿಷ್ಠ 1ಲಕ್ಷ ರೂ. ಪರಿಹಾರ ನೀಡಿ ಎರಡು ತಿಂಗಳು ರಜೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin