ಮೇ ತಿಂಗಳಲ್ಲಿ ನಾಗಸಂದ್ರ-ಎಲಚೇನಹಳ್ಳಿ ಮೆಟ್ರೋ ರೈಲು ಸಂಚಾರ

ಈ ಸುದ್ದಿಯನ್ನು ಶೇರ್ ಮಾಡಿ

Namm-Metro

ಬೆಂಗಳೂರು, ಏ.28- ಮಂತ್ರಿಮಾಲ್‍ನಿಂದ ಮೆಜಸ್ಟಿಕ್‍ವರೆಗಿನ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಮೇ ತಿಂಗಳಲ್ಲಿ ನಾಗಸಂದ್ರ-ಕನಕಪುರ ರಸ್ತೆಯ ಎಲಚೇನಹಳ್ಳಿವರೆಗಿನ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ. ಮೆಟ್ರೋ ಸಂಸ್ಥೆಯ ಪಿಆರ್‍ಒ ರವಿ ಪ್ರಕಾಶ್ ಅವರು ಇಂದು ಬಿಬಿಎಂಪಿ ಅಧಿಕಾರಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದರು.  ಮೇನಲ್ಲಿ ದೊಡ್ಡ ಸಮಾರಂಭ ಹಮ್ಮಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮೆಟ್ರೋ ಸಂಚಾರ ಉದ್ಘಾಟಿಸುವ ಸಂಬಂಧ ಚರ್ಚೆ ನಡೆಸಿದರು.ಈಗಾಗಲೇ ಪೂರ್ವ-ಪಶ್ಚಿಮ ಕಾರಿಡಾರ್ ನಾಯಂಡನಹಳ್ಳಿಯಿಂದ ಬಯ್ಯಪ್ಪನಹಳ್ಳಿವರೆಗಿನ ಮೆಟ್ರೋ ಸಂಚಾರ ಪ್ರಾರಂಭಗೊಂಡಿರುವುದರಿಂದ ನಗರದಲ್ಲಿ ವಾಹನ ದಟ್ಟಣೆಗೆ ಅರ್ಧ ಪರಿಹಾರ ಸಿಕ್ಕಂತಾಗಿದೆ.   ಇದೀಗ ನಾಗಸಂದ್ರ-ಯಲಚೇನಹಳ್ಳಿವರೆಗಿನ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಮೇನಲ್ಲಿ ಸಂಚಾರ ಪ್ರಾರಂಭಗೊಂಡರೆ ವಾಹನದಟ್ಟಣೆ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಂತಾಗುತ್ತದೆ.   ಇನ್ನು ಮುಂದೆ ನಾಲ್ಕು ದಿಕ್ಕಿನಲ್ಲೂ ಪ್ರಯಾಣ ಮಾಡುವವರು ಮೆಟ್ರೋ ಬಳಕೆ ಮಾಡಬಹುದಾಗಿದೆ. ಇದರಿಂದ ಜನರಿಗೆ ಸುಮಾರು ಒಂದರಿಂದ ಒಂದೂವರೆ ಗಂಟೆ ಸಮಯ ಉಳಿತಾಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin