ಮೇ. 30ರಂದು ಔಷಧಿಗಳು ಸಿಗೋದು ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

Medicines--01

ಬೆಂಗಳೂರು,ಮೇ26- ಆನ್‍ಲೈನ್ ಔಷಧ ವ್ಯಾಪಾರವನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಇದೇ 30ರಂದು ಟೌನ್‍ಹಾಲ್ ಮುಂಭಾಗ ಒಂದು ದಿನದ ಬಂದ್‍ಗೆ ಕರೆ ನೀಡಿದೆ ಎಂದು ಅಧ್ಯಕ್ಷ ಎಂ.ಕೆ.ಮಾಯಣ್ಣ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಜರ್ಲ ಮೂಲಕ ಮಾಡುವ ಔಷಧ ವ್ಯಾಪಾರವನ್ನುವಿರೋಧಿಸಿ ಹಾಗೂ ಆನ್‍ಲೈನ್ ಮೂಲಕ ಯಾವುದೇ ಅಡೆತಡೆಗಳಿಲ್ಲದೆ ಔಷಧಗಳ ಹೆಸರಿನಲ್ಲಿ ಮಾದಕ ಹಾಗೂ ಪ್ರತಿಬಂಧಕ ಔಷಧಗಳ ಮಾರಾಟದಿಂದ ಯುವ ಪೀಳಿಗೆಯ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.ದೇಶಾದ್ಯಂತ 8.5 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಸ್ಥರು, ಇದೇ ಉದ್ಯಮವನ್ನು ನಂಬಿ ಜೀವಿಸುತ್ತಿದ್ದಾರೆ. 50 ಲಕ್ಷಕ್ಕೂ ಹೆಚ್ಚಿನ ನೌಕರರು ಮತ್ತು 1.5 ಕೋಟಿ ಅವಲಂಬಿತ ಕುಟುಂಬದವರ ಉಳಿವಿಗಾಗಿ ಮಂಗಳವಾರ ಮಧ್ಯರಾತ್ರಿ 12.01ರಿಂದ ರಾತ್ರಿ 11.59ರವರೆಗೆ(24 ಗಂಟೆಗಳ ಕಾಲ) ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಬೆಳಗ್ಗೆ 10 ಗಂಟೆಗೆ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin