ಮೈಚಳಿ ಬಿಟ್ಟು ನಟಿಸೋಕೆ ದೊಡ್ಡ ಸ್ಟಾರೇ ಬೇಕಾ..?

ಈ ಸುದ್ದಿಯನ್ನು ಶೇರ್ ಮಾಡಿ

zareen-kahan

ಬಾಲಿವುಡ್ ಬೋಲ್ಡ್ ನಟಿ ಝರೀನ್ ಖಾನ್ ಅಸಮಾನತೆ ಮತ್ತು ತಾರತಮ್ಯದ ಬಗ್ಗೆ ಧನಿ ಎತ್ತಿದ್ದಾಳೆ. ದೊಡ್ಡ ತಾರೆಯರು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದರೆ ಎಲ್ಲರೂ ಅವರನ್ನು ಹಾಡಿ ಹೊಗಳುತ್ತಾರೆ. ಆದರೆ, ಅಷ್ಟೇನೂ ಖ್ಯಾತವಲ್ಲದ ನಟಿಯರು ಅದೇ ದೃಶ್ಯವನ್ನು ಮೈಚಳಿ ಬಿಟ್ಟು ನಟಿಸಿದರೆ ಅದನ್ನು ಕಸಕ್ಕೆ ಸಮನವಾಗಿ ನೋಡುತ್ತಾರೆ. ಏಕೆ ಈ ಭೇದಭಾವ ಎಂದು ಈ ಸುಂದರಿ ಬೇಸರದಿಂದ ನುಡಿದಿದ್ದಾಳೆ ಸೂಪರ್ ಹಿಟ್ ಹೇಟ್ ಸ್ಟೋರಿ-3ರಲ್ಲಿ ಮೈ ಚಳಿ ಬಿಟ್ಟು ಬೋಲ್ಡ್ ಸೀನ್ಗಳಲ್ಲಿ ಕಾಣಿಸಿಕೊಂಡ ಈ ಎದೆಗಾತಿ ಪ್ರೇಕ್ಷಕರಲ್ಲಿರುವ ಈ ತಾರತಮ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾಳೆ.

ದೊಡ್ಡ ಹೆಸರು ಇರುವ ನಟಿ ಮಣಿಗಳು ಇಂಥ ದೃಶ್ಯಗಳಲ್ಲಿ (ಬೋಲ್ಡ್ ಸೀನ್ಗಳು) ಕಾಣಿಸಿಕೊಂಡರೆ ಎಲ್ಲರೂ ವಾವ್, ಓ ಮೈ ಗಾಡ್, ಲುಕ್ಕಿಂಗ್ ಸೋ ಹಾಟ್, ಸೂಪರ್-ಹೀಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಅದೇ ಅಷ್ಟೇನೂ ಜನಪ್ರಿಯವಲ್ಲದ ತಾರೆಯೊಬ್ಬಳು ಮೈ ಚಳಿ ಬಿಟ್ಟು ನಟಿಸಿದರೆ ಜನರು ಅದನ್ನು ಕಸದಂತೆ ಕಡೆಗಣಿಸುತ್ತಾರೆ ಎಂದು ಈ ಬಿಂದಾಸ್ ಬೋಲ್ಡ್ ನಟಿ ಬೋಲ್ಡ್ ಆಗಿಯೇ ಮಾತನಾಡಿದ್ದಾಳೆ. ಹಸಿಬಿಸಿ ದೃಶ್ಯಗಳನ್ನು ನೋಡಿ ಅಸಹ್ಯ ಎಂದು ಹೇಳುವ ಮಡಿವಂತಿಕೆಯ ಮಂದಿ ಇಂಥ ಸೀನ್ಗಳನ್ನು ನೋಡಬಾರದು. ಆದರೆ ಇವುಗಳನ್ನು ಹೆಚ್ಚಾಗಿ ನೋಡುವವರೂ ಇವರೇ ಮತ್ತು ಮೂದಲಿಸುವವರೂ ಇವರೇ ಎಂದು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ. ಏಕೆ ಇಂಥ ತಾರತಮ್ಯ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ನಾನು ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಲ್ಲಿ ನಟಿಸಲು ಬಂದಿದ್ದೇನೆ. ನನ್ನ ಪ್ರತಿಮೆ ಮತ್ತು ಸಾಮರ್ಥ್ಯವನ್ನು ಅನಾವರಣಗೊಳಿಸುವುದಷ್ಟೇ ನನ್ನ ಕೆಲಸ ಎಂದು ಝರೀನ್ ಖಡಕ್ಕಾಗಿ ಹೇಳುತ್ತಾಳೆ.

► Follow us on –  Facebook / Twitter  / Google+

Facebook Comments

Sri Raghav

Admin