ಮೈದಾನದಲ್ಲೇ ಪ್ರಪೋಸ್, ಕಿಸ್..! ಅಪರೂಪದ ಪ್ರೇಮಕಥೆಗೆ ಸಾಕ್ಷಿಯಾದ ರಿಯೋ ಒಲಿಂಪಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Rio-Olympics

ರಿಯೋ ಡಿ ಜನೈರೋ, ಆ. 10 : ರಿಯೋ ಒಲಿಂಪಿಕ್ಸ್ ಗೇಮ್ಸ್ ಒಂದು ವಿಶಿಷ್ಟ ಲವ್ ಸ್ಟೋರಿಗೆ ಸಾಕ್ಷಿಯಾಗಿದೆ. ಬ್ರೆಜಿಲ್ ನ ರಗ್ಬಿ ಆಟಗಾರ್ತಿಗೆ ಆಕೆಯ ಗೆಳತಿ ಪ್ರಪೋಸ್ ಮಾಡಿ ಸಿಹಿ ಚುಂಬನ ನೀಡಿದ ಘಟನೆ ಇಲ್ಲಿ ನಡೆದಿದೆ. ಬ್ರೆಜಿಲ್ನ ರಗ್ಬಿ ಸೆವೆನ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆಸ್ಟ್ರೇಲಿಯಾ ತಂಡ ಸೋಲಿಸಿ ಚಿನ್ನದ ಪದಕ ಗೆದ್ದ ಬಳಿಕ ಮೈದಾನದಲ್ಲಿ ಇಬ್ಬರು ಮಹಿಳೆಯರ ಮದುವೆ ಪ್ರೊಪೊಸಲ್ ಪ್ರಸಂಗಕ್ಕೆ ಸಹ ಆಟಗಾರರು ಸಾಕ್ಷಿಯಾಗಿ, ಚಪ್ಪಾಳೆ ತಟ್ಟಿ ಶುಭಹಾರೈಸಿದ್ದಾರೆ.    ಬ್ರೆಜಿಲ್ ನ ಆಟಗಾರ್ತಿ ಇಸಾದೊರ ಸೆರೆಲ್ಲೊ (25) ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದು ಆಕೆಯ ಗೆಳತಿ ಹಾಗೂ ರಗ್ಬಿ ಫೈನಲ್ಸ್ ನಡೆದ ದಿಯೊದೊರಾ ಕ್ರೀಡಾಂಗಣದ ಮ್ಯಾನೆಜರ್ ಮಾರ್ಜೊರಿ ಎನ್ಯಾ(28) . ಸೆರೆಲ್ಲೋ ಬೆರಳಿಗೆ ಉಂಗುರದಂತೆ ಹಳದಿ ಬಣ್ಣದ ರಿಬ್ಬನ್ ಕಟ್ಟುವ ಮೂಲಕ ಎನ್ಯಾ ಮದುವೆ ಬಗ್ಗೆ ಕೇಳಿದ್ದಾರೆ. ಬ್ರೆಜಿಲ್ ಮೂಲದವರಾದರೂ ಸೆರೆಲ್ಲೋ ಓದಿದ್ದು ಬೆಳೆದಿದ್ದು ಉತ್ತರ ಕರೋಲಿನಾ ಹಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ, ಓದಿನ ನಡುವೆ ರಿಯೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.

ಗೆಳತಿ ಎನ್ಯಾಳ ಮನವಿ ಒಪ್ಪಿದ ಸೆರೆಲ್ಲೋ ಕ್ರೀಡಾಂಗಣದಲ್ಲೆ ಆಕೆಯನ್ನು ಅಪ್ಪಿಕೊಂಡು ಚುಂಬಿಸುವ ಮೂಲಕ ಮದುವೆಗೆ ಒಪ್ಪಿಗೆ ಮುದ್ರೆ ಹಾಕಿದ್ದಾರೆ. ನಾವಿಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ, ಸರಿಯಾದ ಸಮಯಕ್ಕೆ ಕಾಯುತ್ತಿದ್ದೆ ಎಂದು ಎನ್ಯಾ ಭಾವುಕರಾಗಿ ಹೇಳಿದರು.  ರಿಯೋದಲ್ಲಿ ಸಲಿಂಗಿ, ತೃತಿಯಲಿಂಗಿ ಅಥ್ಲಿಟ್ಗಳ ಸಮೇತ ಮೂವರು ಕೋಚ್ಗಳು ಸದ್ಯ ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವುದು ವಿಶೇಷ.

Love is in the air with the first proposal of the Rio Olympics

Facebook Comments

Sri Raghav

Admin