ಮೈನವಿರೇಳಿಸಿದ ಅಗ್ನಿ ಕುಂಡ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

fire
ಹುಳಿಯಾರು, ಏ.18-ಹುಳಿಯಾರು ಹೋಬಳಿಟಿ.ಎಸ್.ಹಳ್ಳಿಯ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀಆದಿಶಕ್ತಿ ಚೌಡಮ್ಮನವರಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಗ್ನಿ ಕುಂಡ ಮಹೋತ್ಸವವು ಅತ್ಯಂತ ವೈಭವವಾಗಿಯೂ, ಮೈನವಿರೇಳಿಸುವಂತೆಯೂ ಜರುಗಿತು.ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ, ಹೊಳೆಸೇವೆ ನಂತರಹೊಳೆಯಿಂದ ಶ್ರೀ ಅಮ್ಮನವರ ಮೂಲ ಸ್ಥಾನಕ್ಕೆ ಟಿ.ಎಸ್.ಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹೆಣ್ಣು ಮಕ್ಕಳು ಕಳಸಹೊತ್ತು ಮಂಗಳವಾದ್ಯದೊಂದಿಗೆ ನಡೆಮುಡಿಯಲ್ಲಿ ಆಗಮಿಸಿದರು.ನಂತರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಗ್ನಿಕುಂಡ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಉತ್ಸವದಲ್ಲಿಮೊದಲು ದೇವರ ಬಸವ ಹಾಗೂ ಪಟ್ಟದ ಕಳಸಹೊತ್ತ ಹೆಣ್ಣು ಮಗು ಕೆಂಡಹಾಯ್ದ ನಂತರ ಶ್ರೀಬಸವೇಶ್ವರಸ್ವಾಮಿ ಹಾಗೂ ಶ್ರೀ ಚೌಡಮ್ಮ ದೇವರನ್ನು ಕೆಂಡಹಾಯಿಸಲಾಯಿತು. ತದನಂತರನೂರಕ್ಕೂ ಹೆಚ್ಚುಮಂದಿಭಕ್ತಿ ಪೂರಕವಾಗಿ ಕೆಂಡವನ್ನು ದೇವರ ಹೆಸರನ್ನು ಪಟಿಸುತ್ತ ನಿರ್ಭಯವಾಗಿ ಹಾಯುವ ಮೂಲಕ ತಮ್ಮ ಭಕ್ತಿಬಾವ ಸಮರ್ಪಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin