ಮೈಲಾರಪುರ ಮಹಾದ್ವಾರದ ಕಳಸ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

huliyar--kalasa

ಹುಳಿಯಾರು,ಆ.22- ಹೋಬಳಿಯ ಶ್ರೀರಾಂಪುರದ ಮೈಲಾರಪುರದಲ್ಲಿನ ಏಳುಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಮಹಾದ್ವಾರ ಪುನರ್ ಕಳಸ ಸ್ಥಾಪನೆ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಸ್ಥಾಪಿಸಿದರು. ಅಭಿಷೇಕ, ತೀರ್ಥಪ್ರಸಾದ ವಿನಿಯೋಗ, ಗಣಪತಿ ಪೂಜೆ, ದೇವನಾಂದಿ, ಮಾತೃಕೃಪಾಪೂಜೆ, ಕಲಶಶುದ್ಧಿ ಸೇರಿದಂತೆ ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಕುಪ್ಪೂರು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಅಮೃತಹಸ್ತದಿಂದ ಗಂಗಮಾಳಮ್ಮ ಮತ್ತು ಹೆಗ್ಗಡೆ ನಾರಾಯಣ ದೇವರ ದೇವಾಲಯದ ವಿಮಾನಗೋಪುರ ಕಳಶ ಪ್ರತಿಷ್ಟಾಪನೆ ಹಾಗೂ ಕುಂಭಾಭಿಷೇಕ, ಸ್ವಾಮಿಯವರ ಮೇಲು ದೀಪಸ್ಥಂಭದ ಪ್ರತಿಷ್ಠಾಪನೆ, ಶ್ರೀ ಏಳುಕೋಟಿ ಮೈಲಾರ ಲಿಂಗೇಶ್ವರ ಮಹಾದ್ವಾರದ ಕಲಶ ಪುನರ್ ಪ್ರತಿಷ್ಠಾಪನೆ ನೆರವೇರಿಸಿ ಧಾರ್ಮಿಕ ಸಮಾರಂಭ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಭಕ್ತಸ್ತೋಮಕ್ಕೆ ಅನ್ನಸಂತರ್ಪಣೆ ಮಾಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin