ಮೈಸೂರನ್ನಾವರಿಸಿದ ಮಂಜು : ಪ್ರೇಮಿಗಳಿಗೆ ಚಲ್ಲಾಟ, ವಾಹನ ಸವಾರರಿಗೆ ಪ್ರಾಣಸಂಕರ

ಈ ಸುದ್ದಿಯನ್ನು ಶೇರ್ ಮಾಡಿ

Mysore--025

ಮೈಸೂರು, ಡಿ.8- ನಗರದಲ್ಲಿ ಬೆಳ್ಳಂಬೆಳಗ್ಗೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿ ಪರಿಸರ ಪ್ರೇಮಿಗಳಿಗೆ ಸಂಭ್ರಮ ತಂದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಯಿತು. ಬೆಳಗ್ಗೆ 8 ಗಂಟೆವರೆಗೆ ಮಂಜು ಮುಸುಕಿತ್ತು. ಹಿಮದ ಧಾರೆ ಸುರಿಯುತ್ತಿತ್ತು. ಹಾಗಾಗಿ ವಾಹನ ಸವಾರರು ಹೆಡ್‍ಲೈಟ್ ಹಾಕಿ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ದಟ್ಟ ಮಂಜು ಬಿದ್ದಿದ್ದರಿಂದ ಕೇವಲ 100 ಮೀಟರ್‍ನಲ್ಲಿದ್ದ ವಾಹನಗಳು ಕಾಣುತ್ತಿರಲಿಲ್ಲ. ಕೊರೆಯು ಚಳಿ, ಹಿಮಧಾರೆಯಲ್ಲೇ ವಾಯವಿಹಾರಿಗಳು ದೇಹಪೂರ್ತಿ ಶಾಲ್‍ನಿಂದ ಹೊದ್ದು ವಾಕಿಂಗ್ ಮಾಡಿದರು. ಎಲ್ಲ ವಾಹನ ಸವಾರರು ಅತಿ ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ವಾಹನ ಚಲಿಸುತ್ತಿದ್ದುದು ಕಂಡುಬಂತು. ನಗರ ಹತ್ತಿಯ ರಾಶಿಯನ್ನು ಹೊದ್ದಿದ್ದಂತೆ ಭಾಸವಾಗುತ್ತಿತ್ತು. ನಗರದ ಜನತೆ ಬಹಳ ವರ್ಷಗಳ ನಂತರ ಇಂತಹ ಮಂಜನ್ನು ಕಂಡು ಖುಷಿಪಟ್ಟರು.

Facebook Comments

Sri Raghav

Admin