ಮೈಸೂರಲ್ಲಿ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Schoolk--1

ಮೈಸೂರು, ಜೂ.28- ನಗರದಲ್ಲಿರುವ ಕಿವುಡ ಮತ್ತು ಅಂಧ ಮಕ್ಕಳ ಶಾಲೆಯಿಂದ ನಾಲ್ವರು ಮಕ್ಕಳು ಪರಾರಿಯಾಗಿದ್ದಾರೆ. ತಿಲಕ ನಗರದಲ್ಲಿರುವ ಶಾಲೆಯಿಂದ ಸೋನುಕುಮಾರ್, ರಾಜ್‍ಮಜೀದ್, ಮೋಹನ್ ಹಾಗೂ ದಾಮು ಪರಾರಿಯಾಗಿರುವ ಮಕ್ಕಳು. ಶಾಲೆಯ ಶೌಚಾಲಯದ ಕಿಟಕಿ ಸರಳುಗಳನ್ನು ಮುರಿದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ಮಂಡಿ ಠಾಣೆಗೆ ದೂರು ನೀಡಿದ್ದಾರೆ.  ಈ ವಿದ್ಯಾರ್ಥಿಗಳೆಲ್ಲರೂ 15ರಿಂದ 17 ವರ್ಷದ ವಯಸ್ಸಿನವರಾಗಿದ್ದು, ಪೋಷಕರು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಹುಡುಕಾಟಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin