ಮೈಸೂರಲ್ಲಿ ಟ್ರಿನ್ ಟ್ರಿನ್ ಯೋಜನೆಯ ಸೈಕಲ್‍ಗಳ ಸಂಖ್ಯೆ ಹೆಚ್ಚಳಕ್ಕೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Cycle-Mysuru

ಮೈಸೂರು,ಆ.6- ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ದಸರಾ ಸಂದರ್ಭದಲ್ಲಿ ಟ್ರಿನ್ ಟಿನ್ ಯೋಜನೆಯ ಸೈಕಲ್‍ಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ. ದೇಶವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಸೈಕಲ್‍ಗಳನ್ನು ಒದಗಿಸಲು ಚಿಂತಿಸಲಾಗಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ ಸೈಕಲ್ ಬಳಕೆ ಹೆಚ್ಚಾಗಿರುವುದನ್ನು ಗಮನಿಸಿದ ಜಿಲ್ಲಾಡಳಿತ ಈ ದಸರಾ ಸಂದರ್ಭದಲ್ಲಿ ಹೆಚ್ಚಿನ ಸೈಕಲ್‍ಗಳನ್ನು ಪ್ರವಾಸಿಗರಿಗೆ ಒದಗಿಸಲು ನಿರ್ಧರಿಸಿದೆ.

ಜಿಲ್ಲಾಧಿಕಾರಿ ರಂದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು , ಜೊತೆಗೆ ಸೈಕಲ್ ಟ್ರ್ಯಾಕ್ ಅಭಿವೃದ್ದಿಪಡಿಸಲು ಚರ್ಚಿಸಲಾಯಿತು. ಈ ಬಾರಿ ಟ್ರಿನ್ ಟ್ರಿನ್ ಯೋಜನೆಯ ಸೈಕಲ್‍ಗಳು ಸಾಂಸ್ಕೃತಿಕ ನಗರಿಯಲ್ಲಿ ಹೊಸದಾಗಿ ಒದಗಿಸಿದ್ದು , ದಸರಾ ಸಂದರ್ಭದಲ್ಲಿ ನಗರದೆಲ್ಲೆಡೆ ಸೈಕಲ್‍ಗಳು ರಾರಾಜಿಸಲಿವೆ. ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಟ್ರಿನ್ ಟ್ರಿನ್ ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಸಾಂಸ್ಕøತಿಕ ನಗರಿಯಲ್ಲಿ ಜಾರಿಗೆ ತರಲಾಗಿದೆ.  ಸಭೆಯಲ್ಲಿ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin