ಮೈಸೂರಲ್ಲಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆ, ಬೆಚ್ಚಿಬಿದ್ದ ಜನರು..!

ಈ ಸುದ್ದಿಯನ್ನು ಶೇರ್ ಮಾಡಿ

Mysuru--02

ಮೈಸೂರು, ಜ.19-ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದ್ದು, ನಗರದ ಜನತೆ ಬೆಚ್ಚಿಬಿದ್ದಿದೆ. ವಿಜಯನಗರದ ಎರಡನೆ ಹಂತದಲ್ಲಿರುವ ಚಿಕ್ಕಮ್ಮ ಶಾಲೆಯ ಬಳಿ ಇಂದು ಬೆಳಗ್ಗೆ ತಲೆಬುರುಡೆಗಳು ಪತ್ತೆಯಾಗಿವೆ. ತಲೆಬುರುಡೆಗಳನ್ನು ಚೀಲವೊಂದರಲ್ಲಿ ತುಂಬಿ ಬಿಸಾಡಲಾಗಿತ್ತು. ಚೀಲ ಬಿದ್ದಿದೆಯಲ್ಲ ಎಂಬ ಅನುಮಾನದಿಂದ ನೋಡಿದಾಗ ತಲೆಬುರುಡೆ ಕಂಡುಬಂದಿದ್ದು, ಗಾಬರಿಯಿಂದ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಅನಿಲ್, ಸಬ್‍ಇನ್ಸ್‍ಪೆಕ್ಟರ್ ರಾಘವೇಂದ್ರ ಕುಮಾರ್, ಸಿಬ್ಬಂದಿಗಳಾದ ಮಹದೇವ್, ಶಂಕರ್ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಬುರುಡೆಗಳಿದ್ದ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ಬೇರೆಲ್ಲೋ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯುವಾಗ ತಲೆ ಬುರುಡೆ ಸಿಕ್ಕಿರಬಹುದು. ಅವುಗಳನ್ನು ಇಲ್ಲಿ ಬಿಸಾಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಾರೋ ಮಾಟ-ಮಂತ್ರ ಮಾಡಿಸಲು ತಲೆಬುರುಡೆ ಸಂಗ್ರಹಿಸಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂದಿತು. ತಲೆಬುರುಡೆ ಪತ್ತೆಯಾದ ವಿಷಯ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿದ್ದರು. ಒಟ್ಟಾರೆ ನಗರದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

Facebook Comments

Sri Raghav

Admin