ಮೈಸೂರಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

D.-Randeep,-Deputy-Commissi

ಮೈಸೂರು,ಫೆ.23-ಸಾಂಸ್ಕೃತಿಕ  ನಗರಿ ಮೈಸೂರಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಮತ್ತಷ್ಟು ಮೆರಗು ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೈಸೂರು ಪ್ರವಾಸಿಗರ ತಾಣವಾಗಿದೆ. ದೇಶ-ವಿದೇಶಗಳಿಂದ ಜನರು ಹೆಚ್ಚಾಗಿ ಪ್ರವಾಸಕ್ಕೆ ಬರುವುದರಿಂದ ಮೈಸೂರನ್ನು ಮಾದರಿ ಪ್ರವಾಸಿ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮಿಸಬೇಕು, ಪ್ರವಾಸಿ ತಾಣಗಳಿಗೆ ಇನ್ನಷ್ಟು ಮೆರಗು ನೀಡಲು ರೂಪುರೇಷೆಗಳನ್ನು ಸಿದ್ದಪಡಿಸಿ ಎಂದು ಹೇಳಿದ್ದಾರೆ.

ಮೈಸೂರು ಪ್ಯಾಲೇಸ್, ಚಾಮುಂಡಿ ಬೆಟ್ಟ , ಲಲಿತ್ ಮಹಲ್ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಅಲಂಕೃತ ಹೂಗಳಿಂದ ಉದ್ಯಾನವನ ನಿರ್ಮಿಸುವ ಅಗತ್ಯವಿದೆ ಎಂದರು. ಡಾ.ರಾಜ್‍ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಉದ್ಯಾನವನಗಳನ್ನು ಅಭಿವೃದ್ದಿಪಡಿಸಲು ಪಾಲಿಕೆ ಆಯುಕ್ತ ಜಗದೀಶ್ ಅವರೂ ಸೂಚಿಸಿದ್ದು , ದಸರಾ ವಸ್ತುಪ್ರದರ್ಶನ ಬಳಿ ಇರುವ ಸುರಂಗ ಮಾರ್ಗವನ್ನು ಪಾರಂಪರಿಕ ಸ್ಥಳವನ್ನಾಗಿ ಮಾಡಬೇಕು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin