ಮೈಸೂರಿನತ್ತ ಗಜಪಡೆ ಪ್ರಯಾಣ

ಈ ಸುದ್ದಿಯನ್ನು ಶೇರ್ ಮಾಡಿ

Dasara-02

ಮೈಸೂರು, ಆ.21- ವಿಶ್ವವಿಖ್ಯಾತ ದಸರಾ ಹಿನ್ನೆಲೆಯಲ್ಲಿ ಗಜ ಪಡೆಯ ಮೊದಲ ತಂಡ ಇಂದು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದು, ಗಜ ಪಯಣಕ್ಕೆ ಹುಣಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.   ಇದಕ್ಕೂ ಮುನ್ನ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿರುವ ನಾಗಪುರ ಗಿರಿಜನ ಆಶ್ರಮಶಾಲೆ ಆವರಣಕ್ಕೆ ಆಗಮಿಸಿದ ಕ್ಯಾಪ್ಟನ್ ಅರ್ಜುನನ ನೇತೃತ್ವದ ತಂಡಕ್ಕೆ  ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಆರತಿ ಮಾಡಿ ಸ್ವಾಗತಿಸಿದರು.   750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನನ ಜೊತೆಯಾಗಿ ಬಲರಾಮ, ಅಭಿಮನ್ಯು, ಕಾವೇರಿ, ಗಜೇಂದ್ರ, ವಿಜಯ ಆನೆಗಳು ಮೈಸೂರಿನತ್ತ ಪಯಣ ಬೆಳೆಸಿದವು.

Dasara-001

ಮೈಸೂರಿಗೆ ಆಗಮಿಸಿದ ನಂತರ ಆನೆಗಳು ನಗರ ಹೊರವಲಯದಲ್ಲಿರುವ ಅಲೋಕದಲ್ಲಿ ವಾಸ್ತವ್ಯ ಹೂಡಲಿವೆ. ಹಾಗೆಯೇ ಎರಡನೇ ತಂಡದಲ್ಲಿ ಆಗಮಿಸುವ ಆನೆಗಳು ಸಹ ಇಲ್ಲಿಯೇ ವಾಸ್ತವ್ಯ ಹೂಡಲಿದ್ದು , ಈ ಬಾರಿ ದಸರಾದಲ್ಲಿ ಒಟ್ಟು 12 ಆನೆಗಳು ಪಾಲ್ಗೊಳ್ಳಲಿವೆ.   ಈ ಗಜಪಡೆಯನ್ನು ಇದೇ 26ರಂದು ಮೈಸೂರು ಅರಮನೆಗೆ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳಲಾಗುವುದು ನಂತರ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ.   ಕಾರ್ಯಕ್ರಮದಲ್ಲಿ ಮೇಯರ್ ಭೈರಪ್ಪ , ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ನಯೀಂ ಸುಲ್ತಾನ್, ಜಿಲ್ಲಾಧಿಕಾರಿ ರಣ್ದೀಪ್ ಪಾಟೀಲ್, ಸಚಿವ ತನ್ವೀರ್ ಸೇಠ್, ಶಾಸಕ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin