ಮೈಸೂರಿನಲ್ಲಿ 8ಮಂದಿಗೆ ಎಚ್1ಎನ್1 ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

H1N1

ಮೈಸೂರು,ಫೆ.4-ನಗರ ಸೇರಿದಂತೆ ಜಿಲ್ಲೆಯಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದ್ದು, ಐದು ಮಹಿಳೆಯರು ಸೇರಿದಂತೆ ಎಂಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ 17ರಿಂದ ಇಲ್ಲಿಯ ತನಕ ನಗರ ಪ್ರದೇಶದಲ್ಲಿ 5, ಗ್ರಾಮೀಣ ಪ್ರದೇಶದಲ್ಲಿ ಮೂರು ಎಚ್1ಎನ್ 1 ಪ್ರಕರಣಗಳು ವರದಿಯಾಗಿವೆ. ನಗರದ ಸುಬ್ರಹ್ಮಣ್ಯನಗರ, ಹೆಬ್ಬಾಳ ಮೊದಲ ಹಂತ, ಕುವೆಂಪುನಗರ, ಬೋಗಾದಿ 2ನೇ ಹಂತ, ಹುಣಸೂರು ತಾಲ್ಲೂಕಿನ ಹನಗೂರು, ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಹಾಗೂ ಟಿ.ಎಸ್.ನಗರಗಳಲ್ಲಿ ಎಚ್1ಎನ್1 ಪ್ರಕರಣ ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin