ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ಮಂದಿಯಿಂದ ಮೋದಿ ಭಾಷಣ ವೀಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.11-ದೀನ್ ದಯಾಳ್ ಜನ್ಮಶತಾಬ್ಧಿ ಹಾಗೂ ಸ್ವಾಮಿ ವಿವೇಕಾನಂದರ ಚಿಕಾಗೋ ವಿಶ್ವಧರ್ಮ ಸಮ್ಮೇಳನ 125ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಯಂಗ್ ಇಂಡಿಯಾ ನ್ಯೂ ಇಂಡಿಯಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ನಗರದ ಮಾನಸ ಗಂಗೋತ್ರಿಯ ಸೆನೆಟ್ ಹಾಲ್‍ನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಯಂಗ್ ಇಂಡಿಯಾ ನ್ಯೂ ಇಂಡಿಯಾ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ವಿಶೇಷ ಭಾಷಣ ಮಾಡಲಿದ್ದಾರೆ. ಹಾಗಾಗಿ ಯುಜಿಸಿಯು ಎಲ್ಲಾ ವಿದ್ಯಾರ್ಥಿಗಳು ಮೋದಿಯವರ ವೀಕ್ಷಿಸುವುದು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು ಸೆನೆಟ್ ಹಾಲ್‍ನಲ್ಲಿ ಪ್ರಧಾನಿ ಮೋದಿಯವರ ಭಾಷಣವನ್ನು ವೀಕ್ಷಿಸಿದರು. ಪ್ರಧಾನಿ ಮೋದಿಯವರ ಭಾಷಣ ವೀಕ್ಷಣೆಗಾಗಿ ದೊಡ್ಡ ಪರದೆ ಅಳವಡಿಸಲಾಗಿತ್ತು.

Facebook Comments

Sri Raghav

Admin