ಮೈಸೂರಿನ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್-ಬ್ಯಾನರ್ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Musuru-City--01

ಮೈಸೂರು, ಫೆ.21- ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವುದು, ಬ್ಯಾನರ್ ಕಟ್ಟುವುದನ್ನು ನಿಷೇಧಿಸಲಾಗಿದೆ ಎಂದು ಮೇಯರ್ ರವಿಕುಮಾರ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್ಗಳನ್ನು ಹಾಕುವವರ ವಿರುದ್ಧ ಎಫ್ಐಆರ್ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.  ಸಾರ್ವಜನಿಕ ಸ್ಥಳಗಳಲ್ಲಿ ಶುಭಾಶಯ ಕೋರುವ ಬ್ಯಾನರ್ಗಳು, ಶ್ರದ್ಧಾಂಜಲಿ ಪೋಸ್ಟರ್ಗಳನ್ನು ಅಂಟಿಸಬಾರದು. ಸಿನಿಮಾ ಪೋಸ್ಟರ್ಗಳನ್ನು ಅಂಟಿಸುವುದಕ್ಕೆ ಪಾಲಿಕೆಯಿಂದ ಸೂಕ್ತ ಸ್ಥಳ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ನಗರವನ್ನು ಪೋಸ್ಟರ್ ರಹಿತ ಮಾಡಲು ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು. ದೇಶದ ಮೊದಲ ಸ್ವಚ್ಛ ನಗರಿ ಮೈಸೂರು ನಗರವಾಗಿದ್ದು, ನಗರದಲ್ಲಿ ಪೋಸ್ಟರ್ ಮುಕ್ತ ಅಭಿಯಾನ ಆರಂಭಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮೈ ಇಂಡಿಯಾ, ಪೋಸ್ಟರ್ ಫ್ರೀ ಇಂಡಿಯಾ ಘೋಷಣೆಯೊಂದಿಗೆ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯದ ಸಂಪನ್ಮೂಲ ವ್ಯಕ್ತಿ ಕರ್ನಲ್ ಶಿವರಾಂ ಅವರು ಸ್ವಚ್ಛ ನಗರಿ ಮೈಸೂರಿನಲ್ಲಿ ವಿರೂಪ ತಡೆ ಅಭಿಯಾನ ನಡೆಸಲು ನಿಯೋಜಿಸಲಿದ್ದಾರೆ ಎಂದು ತಿಳಿಸಿದ್ದಾರೆ.   ಶಿವರಾಂ ಅವರು ಮೈಸೂರಿನ ಜನತೆಯಲ್ಲಿ ನಗರ ವಿರೂಪತಡೆ ಅಭಿಯಾನ ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಲ್ ಶಿವರಾಂ ಮಾತನಾಡಿ, ಗೋಡೆಗಳ ಮೇಲೆ ಘೋಷಣೆ ಬರೆಯುವುದು, ಪೋಸ್ಟರ್, ಬ್ಯಾನರ್, ಫ್ಲಕ್ಸ್, ಡಿಜಿಟಲ್ ಬ್ಯಾನರ್ ಹಾಕಿ ನಗರದ ಅಂದ ವಿರೂಪಗೊಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಪೋಸ್ಟರ್ ಮುಕ್ತ ನಗರ ಮಾಡಲು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin