ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ಆಯುಧ ಪೂಜೆ
ಈ ಸುದ್ದಿಯನ್ನು ಶೇರ್ ಮಾಡಿ
ಮೈಸೂರು,ಸೆ.29-ನವರಾತ್ರಿಯ 9ನೇ ದಿನವಾದ ಇಂದು ಅರಮನೆಯಲ್ಲಿ ಮೈಸೂರು ಅರಸರ ಕುಟುಂಬಸ್ಥರಿಂದ ಆಯುಧಪೂಜೆ ನೆರವೇರಿಸಲಾಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಕಲ್ಯಾಣ ಮಂಟಪದಲ್ಲಿ ಇರಿಸಲಾಗಿದ್ದ ಪುರಾತನ ಕಾಲದ ಕತ್ತಿ, ಗುರಾಣಿ, ಯಂತ್ರೋಪಕರಣಗಳು ಹಾಗೂ ವಿವಿಧ ಸಾಮಾಗ್ರಿಗಳಿಗೆ ಪೂಜೆ ಸಲ್ಲಿಸಿದರು.
ಅನಂತರ ಪಟ್ಟದ ಆನೆ, ಕುದುರೆ, ಹಸು ಅರಮನೆಗೆ ಸಂಬಂಧಿಸಿದ ಎಲ್ಲಾ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಇದು ಕೇವಲ ಮೈಸೂರು ಅರಸರ ಕುಟುಂಬಸ್ಥರ ಖಾಸಗಿ ಕಾರ್ಯಕ್ರಮವಾದುದ್ದರಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.
Facebook Comments